ಬೆಂಗಳೂರು/ ನವದೆಹಲಿ: ಎರಡನೇ ಹಂತದ ಕೋವಿಡ್ ವ್ಯಾಕ್ಸಿನ್ ತಾಲೀಮು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ದೇಶಾದ್ಯಂತ ಇಂದು ನಡೆಯಲಿದೆ.
ಯಶಸ್ವಿ ಅನುಷ್ಠಾನಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ನೋಂದಣಿ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಡ್ರೈ ರನ್ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ಜ.2ರಂದು ರಾಜ್ಯದ 5 ಜಿಲ್ಲೆಗಳಾದ ಬೆಂಗಳೂರು, (ಬಿಬಿಎಂಪಿ ಒಳಗೊಂಡಂತೆ), ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಡ್ರೈ ರನ್ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಹಾಗೆಯೇ ದೇಶಾದ್ಯಂತ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನಡೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ತಿಳಿಸಿದ್ದಾರೆ.
ಬೆಂಗಳೂರಿನ 8 ವಲಯಗಳ ಆಸ್ಪತ್ರೆಗಳಲ್ಲಿ ಡ್ರೈ ರನ್:
- ಬೊಮ್ಮನಹಳ್ಳಿ ವಲಯ - ಸಿಂಗಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ
- ದಾಸರಹಳ್ಳಿ ವಲಯ - ಸಪ್ತಗಿರಿ ಮೆಡಿಕಲ್ ಕಾಲೇಜು
- ಈಸ್ಟ್ ವಲಯ - ಹಲಸೂರು ರೆಫೆರಲ್ ಆಸ್ಪತ್ರೆ
- ಮಹದೇವಪುರ ವಲಯ - ಕೆ.ಆರ್.ಪುರಂ ಜನರಲ್ ಆಸ್ಪತ್ರೆ
- ಆರ್.ಆರ್.ನಗರ - ಕೆಂಗೇರಿ ಪಿಹೆಚ್‌ಸಿ
- ಸೌಥ್ ವಲಯ - ಕಿಮ್ಸ್ ಆಸ್ಪತ್ರೆ
- ವೆಸ್ಟ್ ವಲಯ - ಬಿಎಂಸಿ
- ಯಲಹಂಕ ವಲಯ - ಆಸ್ಟ್ರೋ ಸಿಎಂಐ ಆಸ್ಪತ್ರೆ
ಎಲ್ಲೆಲ್ಲಿ ಡ್ರೈ ರನ್ ?
1. ಜಿಲ್ಲಾ ಆಸ್ಪತ್ರೆ/ ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆ