ಕರ್ನಾಟಕ

karnataka

ETV Bharat / state

ಇನ್ಫೋಸಿಸ್​ ನೆರವು: ಕೋವಿಡ್​ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ - super special hospital in bangalore

ಬೆಂಗಳೂರಿನಲ್ಲಿ ಕೋವಿಡ್​ ಚಿಕಿತ್ಸೆಗಾಗಿ ಇನ್ಪೋಸಿಸ್​ ನೆರವಿನಿಂದ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಇಂದು ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು. ಆನ್​ಲೈನ್​ ಮೂಲಕ ಇನ್ಫೋಸಿಸ್​ ಸಂಸ್ಥೆ ಸುಧಾಮೂರ್ತಿ ಪಾಲ್ಗೊಂಡಿದ್ದರು.

corona-treatment-super-special-hospital-open-in-bangalore
ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

By

Published : Aug 26, 2020, 5:57 PM IST

ಬೆಂಗಳೂರು: ಬಿಬಿಎಂಪಿ ಹಾಗೂ ಇನ್ಫೋಸಿಸ್​ ಸಂಸ್ಥೆ ನೆರವಿನಿಂದ ನಿರ್ಮಿಸಲಾದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಇಲ್ಲಿನ ಶಿವಾಜಿನಗರ ಬಳಿಯ ನಾಲ್ಕು ಅಂತಸ್ತಿನ ಆಸ್ಪತ್ರೆ ಇದಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿ 4 ವರ್ಷ ಕಳೆದರೂ ಕಟ್ಟಡವನ್ನು ಉದ್ಘಾಟಿಸಿರಲಿಲ್ಲ. ನಗರದಲ್ಲಿ ಕೋವಿಡ್ ಸೋಂಕಿತರು ಹೆಚ್ಚಾದ ಕಾರಣ ಚಿಕಿತ್ಸೆಗಾಗಿ ಇನ್ಫೋಸಿಸ್ ನೆರವು ಪಡೆದು, 11 ಕೋಟಿ ವೆಚ್ಚದ ಆಸ್ಪತ್ರೆ ಉಪಕರಣಗಳು ಹಾಗೂ ಹಾಸಿಗೆ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಆಸ್ಪತ್ರೆಯ ನಿರ್ವಹಣೆ ಜವಾಬ್ದಾರಿಯನ್ನು ಸರ್ಕಾರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಮಹಾವಿದ್ಯಾಲಯ ಮತ್ತು ವೈದ್ಯಕೀಯ ಸಂಸ್ಥೆಗೆ ಹಸ್ತಾಂತರಿಸಿದೆ. ಒಟ್ಟು 24.38 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 130 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಇದಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

30 ಮಂದಿ ವೈದ್ಯರು, 10 ನುರಿತ ತಜ್ಞವೈದ್ಯರು, 1 ಅಧೀಕ್ಷಕ ವೈದ್ಯರು, ಇಬ್ಬರು ಫಾರ್ಮಸಿಸ್ಟ್, ಒಬ್ಬ ಡೈಯಟೀಷಿಯನ್, 6 ಮಂದಿ ಸ್ಟಾಫ್ ನರ್ಸ್, 6 ಸಿಬ್ಬಂದಿ ಲ್ಯಾಬ್ ಟೆಕ್ನೀಷಿಯನ್ ಸೇರಿದಂತೆ ಸಿಬ್ಬಂದಿಗಳ ನಿಯೋಜನೆ ಕೂಡಾ ಮಾಡಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಸರ್ಕಾರದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಇನ್ಫೋಸಿಸ್​ ಬೆಂಬಲ: ಬಿಬಿಎಂಪಿ, ಇನ್ಫೋಸಿಸ್ ಹಾಗೂ ಬೌರಿಂಗ್ ಸಹಯೋಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ವೆಂಟಿಲೇಷನ್, ಐಸಿಯು ವ್ಯವಸ್ಥೆಗಳು ಲಭ್ಯವಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಇನ್ಫೋಸಿಸ್ ಕೈಜೋಡಿಸಿದೆ ಎಂದು ಸಿಎಂ ಯಡಿಯೂರಪ್ಪ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಡಾ. ಸುಧಾಮೂರ್ತಿಯವರ ಸಾಮಾಜಿಕ ಕಳಕಳಿ ಹಾಗೂ ನೆಲದ ಮೇಲಿನ ಅಭಿಮಾನವನ್ನು ಇದು ತೋರಿಸುತ್ತದೆ. ರಾಜ್ಯದ ಅಭಿವೃದ್ಧಿಯಲ್ಲಿ ಇನ್ಫೋಸಿಸ್ ಕೊಡುಗೆ ಬಹಳ ದೊಡ್ಡದು. ಇನ್ಫೋಸಿಸ್ ಸೇವೆಯನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳುತ್ತದೆ. ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್​ಗಳಿಗೆ 1,700 ಹೆಚ್ಚುವರಿ ಸಿಬ್ಬಂದಿ ನಿಯೋಜನೆ, ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಇನ್ಫೋಸಿಸ್ ಫೌಂಡೇಶನ್​ ಅಧ್ಯಕ್ಷೆ ಸುಧಾಮೂರ್ತಿ ಅವರು ಮಾತನಾಡಿ, ಕೋವಿಡ್ ಕಾರಣದಿಂದಾಗಿ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಮಾರ್ಚ್ 16 ರಂದು ಏರ್ ಕಂಡೀಶನ್ ಇರುವ ಜಾಗವನ್ನು ಲಾಕ್​ಡೌನ್ ಮಾಡುವಂತೆ ಪತ್ರ ಬರೆಯಲಾಗಿತ್ತು. ಇದಕ್ಕೆ ಸ್ಪಂದಿಸಿ ಲಾಕ್​ಡೌನ್ ಮಾಡಿದ್ದರು. ಇದರಿಂದ ಪರಿಸ್ಥಿತಿ ಎದುರಿಸಲು ಸಾಧ್ಯವಾಯಿತು. ಇದಕ್ಕೆ ಧನ್ಯವಾದಗಳು. ಸಚಿವ ಸುಧಾಕರ್​ಗೆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಡಿ ಎಂದು ಕೇಳಿದಾಗ, ಈ ಆಸ್ಪತ್ರೆಯನ್ನು ಸೂಚಿಸಿದರು. ಹೀಗಾಗಿ ಜನರಿಗಾಗಿ ಈ ಸೇವೆ ಮಾಡಿದ್ದೇವೆ. ನನ್ನ ಕರ್ನಾಟಕದ ಜನರಿಗಾಗಿ, ಮನೆ ಮಕ್ಕಳಿಗಾಗಿ ಮಾಡಿದ್ದೇವೆ ಎಂದರು.

ಬೆಂಗಳೂರಿನಲ್ಲಿ ಕೊರೊನಾ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬಿಎಸ್​ವೈ

ಈ ಸಂದರ್ಭದಲ್ಲಿ ಆಸ್ಪತ್ರೆ ಸೌಲಭ್ಯ ಪೂರ್ಣಗೊಳಿಸಲು 25 ಕೋಟಿ ರೂಪಾಯಿ ಅನಿವಾರ್ಯವಾಗಿತ್ತು. ಸರ್ಕಾರದ ಕಠಿಣ ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಕೇಳದೇ ಖಾಸಗಿ ಸಂಸ್ಥೆಯಿಂದ ಮನವಿ ಮಾಡಲು ಮುಂದಾದಾಗ, ಮೊದಲು ಇನ್ಫೋಸಿಸ್​ ಬಳಿ ಬೇಡಿಕೆ ಇರಿಸಲಾಗಿತ್ತು. ಅವರು ಸಂತೋಷದಿಂದ ಒಪ್ಪಿಕೊಂಡು, ಆಸ್ಪತ್ರೆಯನ್ನು ಸುಸಜ್ಜಿತವಾಗಿ ಮಾಡಿಕೊಟ್ಟಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ವೈದ್ಯಕೀಯ ಸಚಿವ ಡಾ. ಸುಧಾಕರ್, ವಸತಿ ಸಚಿವ ವಿ. ಸೋಮಣ್ಣ, ಎಂಎಲ್​ಸಿ ರಿಜ್ವಾನ್ ಅರ್ಷದ್, ಮೇಯರ್ ಗೌತಮ್ ಕುಮಾರ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಭಾಗಿಯಾಗಿದ್ದರು. ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಆನ್​ಲೈನ್ ಮೂಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ABOUT THE AUTHOR

...view details