ಕರ್ನಾಟಕ

karnataka

ಕೊರೊನಾ ಎರಡನೇ ಅಲೆಗೆ ಪೊಲೀಸ್ ಇಲಾಖೆ ಹೈರಾಣ

By

Published : Apr 16, 2021, 5:14 PM IST

ಪಶ್ಚಿಮ ವಿಭಾಗದ ವಿವಿಧ ಠಾಣೆಯಲ್ಲಿ ಬರೋಬ್ಬರಿ 31 ಪಾಸಿಟಿವ್ ಪ್ರಕರಣ, ಪೂರ್ವ ವಿಭಾಗ 9 ಕೇಸ್, ಉತ್ತರ ವಿಭಾಗದಲ್ಲಿ ಒಂದು ಕೇಸ್ ವರದಿಯಾಗಿದೆ..

corona to police department staff in Bangalore
ಕಿಲ್ಲರ್ ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಪೊಲೀಸ್ ಇಲಾಖೆ

ಬೆಂಗಳೂರು :ಕೊರೊನಾ ದಿನೇದಿನೆ ಹೆಚ್ಚಳವಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆ ಸಿಬ್ಬಂದಿ ತತ್ತರಿಸಿದ್ದಾರೆ‌‌. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಸಿಬ್ಬಂದಿಯಲ್ಲಿ ಸೋಂಕು ಕಾಣಿಸುತ್ತಿರುವುದು ಕಳವಳಕಾರಿ‌‌.

ನಗರ ಪೊಲೀಸ್ ಇಲಾಖೆಯಲ್ಲಿ ಈವರೆಗೂ 89 ಮಂದಿ‌ ಪೊಲೀಸ್ ಸಿಬ್ಬಂದಿಗೆ‌ ಸೋಂಕು ದೃಢಪಟ್ಟಿದೆ. ನಗರದ‌‌ ಎಂಟು ವಲಯಗಳಲ್ಲಿ ನಗರದ ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ‌ ತಗುಲಿದೆ‌.

ಇದನ್ನೂ ಓದಿ:ಕೋವಿಡ್ ವ್ಯಾಕ್ಸಿನ್​ ಬ್ಲಾಕ್ ಮಾರ್ಕೆಟ್ ಮಾರಾಟಕ್ಕೆ ಬ್ರೇಕ್ ಹಾಕಲು ಕ್ರಮ : ಸಚಿವ ಬೊಮ್ಮಾಯಿ

ವಿಭಾಗವಾರು ಪ್ರಕರಣ :ಪಶ್ಚಿಮ ವಿಭಾಗದ ವಿವಿಧ ಠಾಣೆಯಲ್ಲಿ ಬರೋಬ್ಬರಿ 31 ಪಾಸಿಟಿವ್ ಪ್ರಕರಣ, ಪೂರ್ವ ವಿಭಾಗ 9 ಕೇಸ್, ಉತ್ತರ ವಿಭಾಗದಲ್ಲಿ ಒಂದು ಕೇಸ್ ವರದಿಯಾಗಿದೆ.

ದಕ್ಷಿಣ ವಿಭಾಗದಲ್ಲಿ 4, ಆಗ್ನೇಯ ವಿಭಾಗ 9, ವೈಟ್‌ಫೀಲ್ಡ್ 1, ಕೇಂದ್ರ ವಿಭಾಗದಲ್ಲಿ 5 ಪ್ರಕರಣ ದಾಖಲಾಗಿವೆ. ಈಶಾನ್ಯ ವಿಭಾಗ 2, ಸಿಎಆರ್ ಹೆಡ್‌ ಕ್ವಾರ್ಟರ್​ನಲ್ಲಿ 10 ಕೇಸ್ ದಾಖಲಾಗಿವೆ.

ABOUT THE AUTHOR

...view details