ಬೆಂಗಳೂರು:ಜಯನಗರದ ಪೋಸ್ಟ್ ಆಫೀಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ 35 ವರ್ಷ ಅಸುಪಾಸಿನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಜೂನ್ 24ರಂದು ಕೆಮ್ಮು-ನೆಗಡಿ, ಮೈ-ಕೈ ನೋವು ಕಾಣಿಸಿಕೊಂಡಿದ್ದು, ಇದನ್ನು ಕಚೇರಿಯ ಅಧಿಕಾರಿಗಳಿಗೆ ತಿಳಿಸಿದಾಗ ರಜೆ ನೀಡಿದ್ದಾರೆ. ಸ್ವತಃ ತಾವೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಇರುವುದು ದೃಢವಾಗಿದೆ. ನಿನ್ನೆ ಕೊರೊನಾ ರಿಪೋರ್ಟ್ ಬಂದಿದ್ದು, ಅವರನ್ನು ನಿಗದಿತ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಪೋಸ್ಟ್ ಆಫೀಸ್ ಸ್ಯಾನಿಟೈಸ್ ಇತ್ತ ಪಾಸಿಟಿವ್ ಬಂದ ಹಿನ್ನೆಲೆ ಪೋಸ್ಟ್ ಆಫೀಸ್ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿದ್ದಾರೆ. ಮೂರು ದಿನ ಸೀಲ್ ಡೌನ್ ಮಾಡಲಾಗಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಐಟಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರಿಂದ ಇತರೆ ಪೋಸ್ಟ್ ಆಫೀಸ್ಗೂ ಭೇಟಿ ನೀಡಿದ್ದು, ಅಲ್ಲಿನ ಸಿಬ್ಬಂದಿಯನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಶಿವನಗರ ವಾರ್ಡ್ನಲ್ಲಿ ಆತಂಕ ಸೃಷ್ಟಿಸಿದ ಕೊರೊನಾ
ಬೆಂಗಳೂರಿನ ಶಿವನಗರ ವಾರ್ಡ್ನಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ಬಂದಿದ್ದು, 46 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಶೀತದಿಂದ ಬಳಲುತ್ತಿದ್ದು, ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಇದುವರೆಗೂ ಈ ವಾರ್ಡ್ನಲ್ಲಿ 19 ಕೇಸ್ಗಳು ಪತ್ತೆಯಾಗಿವೆ. ಸದ್ಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.