ಬೆಂಗಳೂರು: ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ್ದು, ತಾತ್ಕಾಲಿಕವಾಗಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ರಾಜ್ಯ ಅಗ್ನಿಶಾಮಕ ದಳದ ಹೆಚ್ಚುವರಿ ಎಡಿಜಿಪಿ ಸುನಿಲ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ದಳ ಸಿಬ್ಬಂದಿಗೆ ಕೊರೊನಾ: ಬೆಂಗಳೂರಿನ ಕಚೇರಿ ಸೀಲ್ ಡೌನ್ - ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ
ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದ್ದು, ಬೆಂಗಳೂರಿನ ಪ್ರಮುಖ ಅಗ್ನಿ ಶಾಮಕ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿಗೆ ಕೊರೊನಾ
ವಿದ್ಯಾರಣ್ಯಪುರ ಚಾಮುಂಡೇಶ್ವರಿ ಲೇಔಟ್ ನಿವಾಸಿ ಅಗ್ನಿಶಾಮಕ ದಳದ ಆರ್ಎಫ್ಒಗೆ ಕೊರೊನಾ ದೃಢವಾಗಿದೆ. ಈಗ ತುರ್ತು ಸೇವೆಗೆ ಬಂದರೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಮೂಲಕ ತುರ್ತು ಸೇವೆಗಳಿಗೆ ಸ್ಪಂದಿಸಲಾಗುತ್ತದೆ.
ಈಗ ಆರ್ಎಫ್ಒಗೆ ವರ್ಗಾವಣೆಯಾಗಿದ್ದು, ಪೋಸ್ಟಿಂಗ್ ಹಾಕದ ಹಿನ್ನೆಲೆ ಮನೆಯಲ್ಲೇ ಇದ್ದರು. ಸದ್ಯ ಮನೆಯಲ್ಲಿಯೇ ಇದ್ದ ಅಧಿಕಾರಿಗೂ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಸೃಷ್ಟಿಸಿದೆ. ಸದ್ಯ ಮನೆಯಲ್ಲಿದ್ದ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿದೆ.