ಬೆಂಗಳೂರು: ಕೊರೊನಾ ಸೋಂಕು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೀತಿ ಸೃಷ್ಠಿಸಿದೆ. ಹೀಗಾಗಿ ಮುಂಜಾಗೃತ ಕ್ರಮ ಕೈಗೊಂಡಿರುವ ಜೈಲಿನ ಅಧಿಕಾರಿಗಳು ಐದು ಸಾವಿರ ಕೈದಿಗಳ ಪೈಕಿ ಸುಮಾರು 400 ಕೈದಿಗಳನ್ನ ಪ್ರತ್ಯೇಕ ಬ್ಯಾರಕ್ನಲ್ಲಿಟ್ಟು ಕ್ವಾರಂಟೈನ್ ಮಾಡಿದ್ದಾರೆ. ಹಾಗೆ ಅವರಿಗೆ ಬೇಕಾದ ದೈನಂದಿನ ಚಟುವಟಿಕೆಯ ಊಟದ ವ್ಯವಸ್ಥೆ, ಪ್ರತಿಯೊಂದನ್ನ ಪ್ರತ್ಯೇಕವಾಗಿ ಮಾಡಲಾಗಿದೆ.
ಇತ್ತಿಚ್ಚೆಗೆ ಬಂದ ಕೈದಿಗಳಲ್ಲಿ ಕೊರೊನಾ ಧೃಢ:
ಲಾಕ್ ಡೌನ್ ಸಡಿಲಿಕೆಯಾಗ್ತಿದ್ದ ಹಾಗೆ ನಗರದಲ್ಲಿ ಕ್ರೈಂ ಚಟುವಟಿಕೆಗಳು ಹೆಚ್ಚಾಗಿ ಕಂಡು ಬಂದವು. ಈ ಸಂಧರ್ಭದಲ್ಲಿ ಆರೋಪಿಗಳನ್ನ ಹಿಡಿದು ಕೊರೊನಾ ಸೋಂಕಿನ ಲಕ್ಷಣ ಪರಿಕ್ಷೆ ನಡೆಸಿದಾಗ ನೆಗಟಿವ್ ಬಂದ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಕೊರೊನಾ ಸೋಂಕಿನ ಲಕ್ಷಣ ಹೊಂದಿದವರು ಜೈಲಿಗೆ ಹೋದ ನಂತ್ರ 26 ಕೈದಿಗಳಲ್ಲಿ ಕೊರೊನಾ ಧೃಢವಾಗಿದೆ ಎಂದು ಜೈಲಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸದಾಗಿ ಬರುವ ಕೈದಿಗಳ ಮೇಲೆ ನಿಗಾ:
ಸ್ವಲ್ಪ ಯಾಮಾರಿದ್ರು ಜೈಲಿನಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಯಾಕಂದ್ರೆ ಜೈಲಿನಲ್ಲಿ ಈಗಾಗಲೇ ಭೂಗತ ಪಾತಕಿ ರವಿ ಪೂಜಾರಿ ಸೇರಿದಂತೆ ಹಲವಾರು ಮಂದಿ ತನಿಖೆಗೆ ಬೇಕಾದ ಕೈದಿಗಳು ಜೈಲಿನಲ್ಲಿದ್ದಾರೆ. ಹಾಗೆ ಕೈದಿಗಳಲ್ಲಿ ವ್ಯಾಪಕವಾಗಿ ಸೋಂಕು ಹರಡಿದರೆ ದೊಡ್ಡ ಅನಾಹುತ ಸಂಭವಿಸಲಿದೆ. ಹೀಗಾಗಿ ಎಚ್ಚರಿಕೆಯಿಂದಿರುವಂತೆ ಜೈಲಾಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.
ಏನೆಲ್ಲಾ ನಿಯಮ ಪಾಲನೆ ಮಾಡಬೇಕು?
ಹೊಸದಾಗಿ ದಾಖಲಾಗುವ ಎಲ್ಲಾ ಕೈದಿಗಳನ್ನು ಪರೀಕ್ಷೆಗೆ ಒಳಪಡಿಸಿ 21 ದಿನಗಳ ಕಾಲ ಪ್ರತ್ಯೇಕವಾಗಿ ಇಡಬೇಕು. ಹಾಗೆ ಕೆಮ್ಮು, ನೆಗಡಿ ಹಾಗೂ ಜ್ವರದ ಲಕ್ಷಣ ಕಂಡುಬಂದರೆ ಜೈಲು ಆಸ್ಪತ್ರೆಯಲ್ಲಿ ಟೆಸ್ಟ್ಗೆ ಒಳಪಡಿಸಬೇಕು. ಹಾಗೆ ಕಾರಾಗೃಹಗಳ ಮುಖ್ಯ ದ್ವಾರಗಳಲ್ಲಿ ಹಾಗೂ ಕೈದಿಗಳನ್ನ ನೋಡುವ ಇತರೆ ಪ್ರಮುಖ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಸಿಬ್ಬಂದಿ ಮಾಸ್ಕ್ ಹಾಗೂ ಕೈಗವಸು ಹಾಕಬೇಕು.
ಕೈದಿಗಳ ಕುಟುಂಬಸ್ಥರಿಗೆ ನಿರ್ಬಂಧ:
ಒಂದೆಡೆ ಪರಪ್ಪನ ಅಗ್ರಹಾರದ ಎಲ್ಲಾ ಚಟುವಟಿಕೆಗೆ ಬ್ರೇಕ್ ಹಾಕಲಾಗಿದೆ. ಯಾಕಂದ್ರೆ ಒಳಗಡೆ ಇರುವ ಕೈದಿಗಳಿಗೆ ಕುಟುಂಬಸ್ಥರು ಅಥವಾ ವಕೀಲರು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಊಟ ಕಳುಹಿಸಿಕೊಡ್ತಿದ್ರು. ಸದ್ಯ ಕೈದಿಗಳು ಕುಟುಂಬಸ್ಥರನ್ನ ಬೇಟಿಯಾಗುವಂತಿಲ್ಲ. ಹಾಗೆ ಜೈಲಿನ ಒಳಗಡೆ ಗುಂಪು ಸೇರುವುದು ವಿನಾಕಾರಣ ಕಾಲಹರಣ ಮಾಡೋದು, ಅಡ್ಡಾದಿಡ್ಡಿ ಓಡಾಡೋದಕ್ಕೆ ಬ್ರೆಕ್ ಹಾಕಲಾಗಿದೆ. ಯಾರಿಗೆ ಯಾವ ಬ್ಯಾರಕ್ ಸೂಚಿಸಲಾಗಿದೆ ಅದರಲ್ಲಿಯೆ ಇರಬೇಕು. ಜೈಲಾಧಿಕಾರಿಗಳು ಕರೆದಾಗ ಮಾತ್ರ ಬರಬೇಕು.