ಬೆಂಗಳೂರು: ಕೊರೊನಾ ಸೋಂಕು ಸದ್ಯ ಕೊರೊನಾ ವಾರಿಯರ್ಗಳನ್ನು ಬೆಂಬಿಡದೆ ಕಾಡುತ್ತಿದೆ. ಕೊರೊನಾ ವಾರಿಯರ್ ಆಗಿ ಸಿಲಿಕಾನ್ ಸಿಟಿಯಲ್ಲಿ ಕಾರ್ಯನಿರ್ವಹಣೆ ಮಾಡುವ 18 ಪೊಲೀಸರಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಬೆಂಗಳೂರಲ್ಲಿ 24 ಗಂಟೆಯಲ್ಲಿ 18 ಪೊಲೀಸರಿಗೆ ಅಂಟಿದ ಕೊರೊನಾ! - ಕೊರೊನಾ ಸೋಂಕು
ಸಿಲಿಕಾನ್ ಸಿಟಿಯ ಲಾಕ್ಡೌನ್ ಭದ್ರತೆ, ಸೀಲ್ ಡೌನ್ ಏರಿಯಾ ಹಾಗೂ ಇನ್ನಿತರೆ ವಿಚಾರದಲ್ಲಿ ತಮ್ಮ ಕೆಲಸ ನಿರ್ವಹಣೆ ಮಾಡುವಾಗ ಕೊರೊನಾ ಕೊರೊನಾ ವಾರಿಯರ್ಸ್ಗೆ ಸೋಂಕು ಹರಡಿದೆ.
![ಬೆಂಗಳೂರಲ್ಲಿ 24 ಗಂಟೆಯಲ್ಲಿ 18 ಪೊಲೀಸರಿಗೆ ಅಂಟಿದ ಕೊರೊನಾ! Corona tested positive to police staff in Bangalore](https://etvbharatimages.akamaized.net/etvbharat/prod-images/768-512-8095760-thumbnail-3x2-nin.jpg)
ಸದ್ಯ 49 ಜನ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಹೊರ ಬಂದು ವಿಶ್ರಾಂತಿಯಲ್ಲಿದ್ದಾರೆ. ಕೊರೊನಾ ಬಂದ ದಿನದಿಂದ ಇಲ್ಲಿಯವರೆಗೆ ಒಟ್ಟು 883 ಮಂದಿಗೆ ಕೊರೊನಾ ದೃಢವಾಗಿದೆ. 883ರ ಪೈಕಿ 604 ಗುಣಮುಖರಾಗಿ 807 ಮಂದಿ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಸದ್ಯ ಸಿಲಿಕಾನ್ ಸಿಟಿಯ ಲಾಕ್ಡೌನ್ ಭದ್ರತೆ, ಸೀಲ್ ಡೌನ್ ಏರಿಯಾ ಹಾಗೂ ಇನ್ನಿತರೆ ವಿಚಾರದಲ್ಲಿ ತಮ್ಮ ಕೆಲಸ ನಿರ್ವಹಣೆ ಮಾಡುವಾಗ ಕೊರೊನಾ ಸೋಂಕು ಹರಡಿದೆ.
ಸದ್ಯ ಹಿರಿಯ ಅಧಿಕಾರಿಗಳು ಮತ್ತೊಮ್ಮೆ ಸೂಚನೆ ಹೊರಡಿಸಿದ್ದಾರೆ. ಪ್ರತಿಯೊಬ್ಬ ಪೊಲೀಸ್ ಕರ್ತವ್ಯ ನಿರ್ವಹಣೆ ಮಾಡುವಾಗ ಅನಿವಾರ್ಯ ಪ್ರದೇಶಗಳಲ್ಲಿ ಪಿಪಿಇ ಕಿಟ್ ಹಾಕಿ ಕೆಲಸ ನಿರ್ವಹಣೆ ಮಾಡುವಂತೆ ಸೂಚಿಸಿದ್ದಾರೆ.