ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 31,198 ಜನರಲ್ಲಿ ಕೊರೊನಾ, 50 ಸಾವು - ಕರ್ನಾಟಕದ ಕೊರೊನಾ ಮಾಹಿತಿ

ರಾಜ್ಯದಲ್ಲಿ ಇಂದು 31,198 ಜನರಿಗೆ ಕೊರೊನಾ ವಕ್ಕರಿಸಿದ್ದು, ಈ ಮಹಾಮಾರಿಗೆ 50 ಜನರು ಸಾವಿಗೀಡಾಗಿದ್ದಾರೆ..

ರಾಜ್ಯದಲ್ಲಿಂದು  31,198  ಜನರಲ್ಲಿ ಕೊರೊನಾ, 50  ಸಾವು
ರಾಜ್ಯದಲ್ಲಿಂದು 31,198 ಜನರಲ್ಲಿ ಕೊರೊನಾ, 50 ಸಾವು

By

Published : Jan 28, 2022, 9:02 PM IST

ಬೆಂಗಳೂರು :ರಾಜ್ಯದಲ್ಲಿ ದಿನದ ಕೋವಿಡ್ ಸಕ್ರಿಯ ಪ್ರಕರಣದಲ್ಲಿ ಮತ್ತೆ ಇಳಿಕೆ ಕಂಡು ಬಂದಿದ್ದು, ನಿನ್ನಗೆ ಹೋಲಿಸಿದರೆ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಸುಮಾರು 7 ಸಾವಿರ ವ್ಯತ್ಯಾಸ ಕಂಡು ಬಂದಿದೆ.

ಕರ್ನಾಟಕದಲ್ಲಿಂದು 31,198 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿ ಸೋಂಕಿತರ ಸಂಖ್ಯೆ 37,23,694ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 71,092 ಮಂದಿಯಾಗಿದ್ದಾರೆ. ಬೆಂಗಳೂರು ನಗರ ಒಂದರಲ್ಲೇ 15,199 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಅರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 33,96,093 ಮಂದಿಯಾಗಿದ್ದರೆ, ಕೋವಿಡ್ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,88,767 ಎಂದು ದಾಖಲಾಗಿದೆ ಎಂದು ಹೇಳಿದೆ. ಚಿಕಿತ್ಸೆ ಫಲಿಸದೇ ಶುಕ್ರವಾರ ಸಾವನ್ನಪ್ಪಿದವರು 50 ಮಂದಿಯಾಗಿದ್ದಾರೆ.

ಆದ್ದರಿಂದ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,804ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಗುರುವಾರ 38,083 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details