ಬೆಂಗಳೂರು : ಮಹಿಳಾ ಪೇದೆಯೊಬ್ಬರನ್ನು ಕೊರೊನಾ ಶಂಕೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಇಲಾಖೆಗೂ ತಟ್ಟಿದ ಕೊರೊನಾ ಭೀತಿ: ಶಂಕಿತ ಮಹಿಳಾ ಪೇದೆ ಆಸ್ಪತ್ರೆಗೆ ದಾಖಲು - ಕೊರೊನಾ ವೈರಸ್ ಲಕ್ಷಣಗಳು
ಸಿಲಿಕಾನ್ ಸಿಟಿಯ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಪೇದೆಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಇಲಾಖೆಗೂ ತಟ್ಟಿದ ಕೊರೊನಾ ಭೀತಿ
ಸಿಲಿಕಾನ್ ಸಿಟಿಯ ಠಾಣೆಯೊಂದರಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಪೇದೆಗೆ ಕೊರೊನಾ ಸೋಂಕು ತಗುಲಿರುವ ಶಂಕೆ ಮೇರೆಗೆ ನಗರದ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆಗೆ ಒಳಪಡಿಸಿದ್ದಾರೆ.
ಇವರ ಜೊತೆ ಒಂದೇ ರೂಂನಲ್ಲಿ ನಾಲ್ಕು ಜನ ಮಹಿಳಾ ಪೇದೆಗಳು ವಾಸವಿದ್ದರು. ಅದರಲ್ಲಿ ಓರ್ವ ಮಹಿಳಾ ಪೇದೆಗೆ 3 ದಿನದಿಂದ ಅನಾರೋಗ್ಯ ಕಂಡು ಬಂದಿದ್ದು, ಇಂದು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.