ಬೆಂಗಳೂರು: ಜನ ಸಾಮಾನ್ಯರಿಗೆ ಇತ್ತೀಚೆಗೆ ಬರ್ತಿರೋ ವರದಿಗಳ ಪ್ರಕಾರ ಕೊರೊನಾ ಬದಲಾಯಿಸಿಕೊಂಡು ಬಿಟ್ಟಿದೆ ಜೆನೆಟಿಕಲಿ ಚೇಂಜ್ ಆಗಿದೆ ಹಾಗಾಗಿ ಜನರಲ್ಲಿ ಫಾಲ್ಸ್ ಪಾಸಿಟಿವ್ ಟೆಸ್ಟ್ ರಿಪೋರ್ಟ್ ಬರ್ತಿದೆ ಅನ್ನೋ ಅನುಮಾನಗಳು ಕಾಡಲು ಆರಂಭಿಸಿದೆ.
ಕೊರೊನಾ ವಿಚಾರದಲ್ಲಿ ದಿನಕ್ಕೊಂದು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಈಗ ಇವೆಲ್ಲದರ ನಡುವೆ ಆತಂಕಕಾರಿ ವಿಚಾರವನ್ನು ತಜ್ಞ ವೈದ್ಯರು ಬಯಲಿಗೆ ಎಳೆದಿದ್ದಾರೆ. ಕೊರೊನಾ ಹಲವಾರು ಬಗೆಯಲ್ಲಿ ರೂಪಾಂತರಗೊಂಡಿದ್ದು ಈಗ ಸದ್ಯ ಪತ್ತೆ ಹೆಚ್ಚುತ್ತಿರುವ ಯಾವುದೇ ಉಪಕರಣಗಳಿಂದ ಪತ್ತೆ ಹಚ್ಚಲಾಗದಂತೆ ಕೊರೊನಾ ಬದಲಾಗಿದೆ. ಕೊರೊನಾ ಪತ್ತೆ ಹಚ್ಚಲು ಆಗುತ್ತಿಲ್ಲ, ಶ್ವಾಸಕೋಶದ ಸಿಟಿ ಸ್ಕ್ಯಾನ್ ಮಾಡಿದ ಸಮಯದ ವೇಳೆ ಆಘಾತಕಾರಿ ಮಾಹಿತಿ ಬೆಳಕಿಗೆ ಬರ್ತಿದೆ. ಸದ್ಯ ಕೊರೊನಾ ಲಸಿಕೆ ಕಂಡು ಹಿಡಿಯುತ್ತಿರುವ ಹಂತದಲ್ಲಿ ಈಗ ಕೊರೊನಾಗೆ ಕಿಟ್ ತಯಾರಿಕೆ ಮಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಈಗ ಲಭ್ಯವಿರುವ ಯಾವುದೇ ಸಾಧನಗಳಲ್ಲಿಯೂ ಮತ್ತು ಆರ್ಟಿಪಿಸಿಆರ್ ಟೆಸ್ಟ್ ಮಾಡಿದ್ರು ಕೂಡ ಕೊರೊನಾ ಪಾಸಿಟಿವ್ ಇದ್ರು ನೆಗೆಟಿವ್ ರಿಪೋರ್ಟ್ ಬಂದು ಆತಂಕ ಹುಟ್ಟಿಸಿದೆ. ಭಾರತದಲ್ಲಿ ಸದ್ಯ ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದು, ಎರಡನೇ ಅಲೆಯ ಭೀತಿ ಎದುರಿಸುತ್ತಿರುವಾಗ ವೈದ್ಯರು ಈ ರೀತಿಯ ಆಘಾತಕಾರಿ ವಿಷಯವನ್ನು ಹೇಳಿರುವುದು ತಲ್ಲಣ ಮೂಡಿಸಿದೆ. ಈಗಾಗಲೇ ರಾಜ್ಯದಲ್ಲಿ ಎರಡನೇ ಹಂತದ ಕೊರೊನಾ ಫೆಬ್ರವರಿ ಮಾರ್ಚ್ನಲ್ಲಿ ಬರುತ್ತದೆ ಅನ್ನುವ ಮಾಹಿತಿಯನ್ನು ತಜ್ಞ ವೈದ್ಯರು ನೀಡಿದ್ದಾರೆ.