ಬೆಂಗಳೂರು: ಲಾಕ್ಡೌನ್ನಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದ ಸಾರಿಗೆ ಸಂಸ್ಥೆ ಬಹುದೊಡ್ಡ ಮಟ್ಟದ ಆರ್ಥಿಕ ಸಮಸ್ಯೆ ಎದುರಿಸಿತ್ತು. ಅನ್ಲಾಕ್ ಪ್ರಾರಂಭದಲ್ಲೂ ಅದೇ ಪರಿಸ್ಥಿತಿ ಮುಂದುವರೆದಿತ್ತು. ಸದ್ಯ ಸಾರಿಗೆ ಸೇವೆ ಚೇತರಿಸಿಕೊಂಡಿದೆ. ಆದ್ರೆ ಬಸ್ಗಳಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ನೀಡುವ ಕಾರ್ಯ ಮಾತ್ರ ಮಾಯವಾಗಿದೆ.
ಹುಬ್ಬಳ್ಳಿ ನಗರ ವಿಭಾಗದಲ್ಲಿ ಸುಮಾರು 776 ಬಸ್ ಕಾರ್ಯಾಚರಣೆ ನಡೆಸುತ್ತಿದ್ದು, ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಇದರಿಂದಾಗಿ ಆದಾಯದಲ್ಲೂ ಏರಿಕೆ ಕಂಡಿದೆ. ಆದರೆ, ಬಸ್ಗಳಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರವನ್ನೇ ಪಾಲಿಸುವುದಿಲ್ಲ. ಯಾರೊಬ್ಬರೂ ಸ್ಯಾನಿಟೈಸರ್ ಬಳಸುತ್ತಿಲ್ಲ. ಅಲ್ಲದೆ, ಇದರಲ್ಲಿ ಸಾರಿಗೆ ಸಿಬ್ಬಂದಿಯ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ.
ಬಸ್ಗಳಲ್ಲಿ ಕೋವಿಡ್ ನಿಯಮಗಳ ಪಾಲನೆ ಮರೀಚಿಕೆ ಕೋವಿಡ್ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ಮೈಸೂರು ನಗರ ಸಾರಿಗೆ ವ್ಯವಸ್ಥೆ ಕೂಡ ಸುಧಾರಣೆಯತ್ತ ಹೆಜ್ಜೆ ಹಾಕಿದೆ. ಡಿಸೆಂಬರ್ನಲ್ಲಿ 235 ಬಸ್ಗಳು ಸಂಚಾರ ನಡೆಸುತ್ತಿದ್ದು, ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಬಸ್ನಲ್ಲಿ ಓಡಾಡ್ತಿದ್ರು. ಜನವರಿಯಿಂದ ಓಡಾಡುವ ಬಸ್ಗಳ ಸಂಖ್ಯೆ 235ರಿಂದ 335ಕ್ಕೆ ಹೆಚ್ಚಾಗಿದೆ. ಅಲ್ಲದೆ, ಆದಾಯವೂ ಹೆಚ್ಚಾಗಿದೆ. ಆದರೆ, ಕೋವಿಡ್ ನಿಯಮಗಳ ಪಾಲನೆಯೇ ಮರೀಚಿಕೆಯಾಗಿದೆ.
ಇನ್ನು ಪ್ರತಿದಿನ ಬಸ್ಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದ್ದು, ಬಸ್ ನಿರ್ವಾಹಕ ಮತ್ತು ಚಾಲಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಪ್ರಯಾಣಿಕರಿಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದ್ದರೂ ಯಾರೊಬ್ಬರೂ ಪಾಲಿಸುತ್ತಿಲ್ಲ. ಇದು ಸೋಂಕು ಹರಡಲು ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ, ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.