ಕರ್ನಾಟಕ

karnataka

ETV Bharat / state

ಮದುವೆ,ರಾಜಕೀಯ ಸಭೆಗೆ 200 ಮಂದಿಗೆ ಮಾತ್ರ ಅವಕಾಶ : ಸರ್ಕಾರದಿಂದ ಕೊರೊನಾ ಪರಿಷ್ಕೃತ ಮಾರ್ಗಸೂಚಿ

ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ 200 ಮಂದಿ ಮೀರದಂತೆ ಹಾಗೂ ಕಲ್ಯಾಣ ಮಂಟಪ, ಹಾಲ್​ಗಳಲ್ಲಿ 100 ಜನ ಮೀರದಂತೆ ಜನ ಸೇರಬೇಕು ಎಂದು ಆದೇಶ ಹೊರಡಿಸಲಾಗಿದೆ..

Corona Revised Guidelines from the Government
ಸರ್ಕಾರದಿಂದ ಕೊರೊನಾ ಪರಿಷ್ಕೃತ ಮಾರ್ಗಸೂಚಿ

By

Published : Apr 16, 2021, 8:38 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಅಬ್ಬರ ಜೋರಾಗಿರುವ ಹಿನ್ನೆಲೆ ಮತ್ತಷ್ಟು ಬಿಗಿ ಕ್ರಮಗಳನ್ನೊಳಗೊಂಡ ಪರಿಷ್ಕೃತ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ.

ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ಇನ್ನಷ್ಟು ಬಿಗಿ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ.

ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ 200 ಮಂದಿ ಮೀರದಂತೆ ಹಾಗೂ ಕಲ್ಯಾಣ ಮಂಟಪ, ಹಾಲ್​ಗಳಲ್ಲಿ 100 ಜನ ಮೀರದಂತೆ ಜನ ಸೇರಬೇಕು ಎಂದು ಆದೇಶ ಹೊರಡಿಸಲಾಗಿದೆ.

ಜನ್ಮದಿನ ಹಾಗೂ ಇತರೆ ಆಚರಣೆ: ತೆರೆದ ಪ್ರದೇಶ- 50 ಮಂದಿಗೆ ಮಿತಿ, ಒಳಾಂಗಣ- 25 ಮಂದಿಗೆ ಮಿತಿ,

ನಿಧನ/ಶವಸಂಸ್ಕಾರ: ತೆರೆದ ಪ್ರದೇಶ- 50 ಮಂದಿಗೆ ಮಿತಿ, ಒಳಾಂಗಣ- 25 ಮಂದಿಗೆ ಮಿತಿ

ಅಂತ್ಯಕ್ರಿಯೆ: 25 ಜನ ಮೀರಬಾರದು

ಇತರೆ ಸಮಾರಂಭ: 50 ಮಂದಿ ಮೀರಬಾರದು

ರಾಜಕೀಯ ಸಭೆ: ತೆರೆದ ಪ್ರದೇಶದಲ್ಲಿ 200 ಮಂದಿ ಮೀರಬಾರದು

ಧಾರ್ಮಿಕ ಆಚರಣೆ: ಸಂಪೂರ್ಣ ನಿಷೇಧ

ABOUT THE AUTHOR

...view details