ಬೆಂಗಳೂರು: ರಾಜ್ಯದಲ್ಲಿ ಮೊದಲು ಕೊರೊನಾ ವೈರಸ್ ವಿದೇಶದಿಂದ ಬಂದವರಿಂದ ಹರಡುತ್ತಿತ್ತು. ಬಳಿಕ ಕೊರೊನಾ ನಿಯಂತ್ರಣದಲ್ಲಿದ್ದು, ಯಾವುದೇ ಆತಂಕ ಬೇಡವೆಂದು ಹೇಳುತ್ತಿದ್ದ ಆರೋಗ್ಯ ಇಲಾಖೆಗೆ ಶಾಕ್ ಕೊಟ್ಟಿದೆ. ದೆಹಲಿಯ ತಬ್ಲಿಘಿ, ಬೆಂಗಳೂರಿನ ಹೊಂಗಸಂದ್ರದ ಬಿಹಾರಿ ಕೂಲಿ, ಶಿವಾಜಿನಗರದ ಹೌಸ್ ಕೀಪರ್ನಿಂದ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಆಗಿದೆ.
ಇದೀಗ ಮುಂಬೈ ಟ್ರಾವೆಲ್ ಹಿಸ್ಟರಿ ಇರುವವರೇ ರಾಜ್ಯಕ್ಕೆ ಕಂಟಕರಾಗಿದ್ದಾರೆ. ರಾಜ್ಯದಲ್ಲಿ ಮುಂಬೈನಿಂದ ಬಂದ 108 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.