ಬೆಂಗಳೂರು: ರಾಜ್ಯದಲ್ಲಿ ಪದವಿ-ಸ್ನಾತಕೋತ್ತರ ಪದವಿ ಕಾಲೇಜು ಆರಂಭವಾಗಿ 5 ದಿನಗಳು ಕಳೆದಿವೆ. ಕಾಲೇಜಿಗೆ ವಿದ್ಯಾರ್ಥಿಗಳು ಬರಬೇಕು ಅಂದ್ರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಕಾಲೇಜಿನ ಆಡಳಿತ ಮಂಡಳಿಗಳು ಕೋವಿಡ್ ರಿಪೋರ್ಟ್ ಇದ್ದರಷ್ಟೇ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು. ಆದರೆ ಬಿಬಿಎಂಪಿ ವ್ಯಾಪ್ತಿಯ ಪದವಿ ಕಾಲೇಜಿನಲ್ಲಿ ಎಡವಟ್ಟಾಗಿದೆ. ಮೈಸೂರು ರೋಡ್ ಬಳಿ ಇರುವ ಸಂಯುಕ್ತ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.
ಬಿಬಿಎಂಪಿ ಪದವಿ ಕಾಲೇಜು ಉಪನ್ಯಾಸಕಿಗೆ ಕೊರೊನಾ: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ - ಬಿಬಿಎಂಪಿ ಡಿಗ್ರಿ ಕಾಲೇಜಿನ ಉಪನ್ಯಾಸಕಿಗೆ ಕೊರೊನಾ
ಕೊರೊನಾ ರೂಲ್ಸ್ ಬ್ರೇಕ್ ಮಾಡಿದ ಪರಿಣಾಮ ಕಾಲೇಜಿನ ವಿದ್ಯಾರ್ಥಿಗಳಲ್ಲಿ, ಸಿಬ್ಬಂದಿಗೆ ಕೊರೊನಾ ಆತಂಕ ಶುರುವಾಗಿದೆ. ಯಾಕಂದರೆ ಕೋವಿಡ್ ರಿಪೋರ್ಟ್ ಇಲ್ಲದೆಯೇ ನ.17ರಂದು ಕಾಲೇಜಿಗೆ ಬಂದಿದ್ದ ಉಪನ್ಯಾಸಕಿವೋರ್ವರಿಗೆ ಕೊರೊನಾ ದೃಢಪಟ್ಟಿದೆ. ನವೆಂಬರ್ 18ರಂದು ವಿದ್ಯಾರ್ಥಿಗಳಿಗೆ ತರಗತಿ ತೆಗೆದುಕೊಂಡಿದ್ದಾರೆ. ಆ ದಿನ ರಾತ್ರಿಯೇ ಉಪನ್ಯಾಸಕಿಗೆ ಕೋವಿಡ್ ಇರುವುದು ದೃಢಪಟ್ಟಿದೆ ಎನ್ನಲಾಗ್ತಿದೆ. ಹೀಗಾಗಿ ಉಪನ್ಯಾಸಕಿ ಜೊತೆ ಸಂಪಕರ್ದಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಇಬ್ಬರಿಗೆ ಕೊರೊನಾ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಪೋಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಶುರುವಾಗಿದೆ.

ಇತ್ತ, ಉಪನ್ಯಾಸಕಿಗೆ ಪಾಸಿಟಿವ್ ಬಂದಿದೆ ಅಂತಾ ತಿಳಿದ ತಕ್ಷಣ ಎಲ್ಲಾ ವಿದ್ಯಾರ್ಥಿಗಳು ಕಾಲೇಜ್‌ಗೆ ಗೈರಾಗಿದ್ದಾರೆ. ಬಿಕಾಂ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದ ಉಪನ್ಯಾಸಕಿ ರಿಪೋರ್ಟ್ ಬರುವ ಮುನ್ನವೇ ಕಾಲೇಜಿಗೆ ತೆರಳಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.