ಬೆಂಗಳೂರು: ಇಮ್ರಾನ್ ಪಾಷಾ ಬಳಿಕ ನಗರದ ಮತ್ತೊಬ್ಬ ಪಾಲಿಕೆ ಸದಸ್ಯನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಿದ್ಧಾಪುರ ವಾರ್ಡ್ನಲ್ಲಿ ಈಗಾಗಲೇ ಕೊರೊನಾ ಅತಿಹೆಚ್ಚು ಸಂಖ್ಯೆಯಲ್ಲಿ ಕಂಡುಬಂದಿದೆ. ಅದೇ ವಾರ್ಡ್ ನ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಮುಜಾಹಿದ್ದಿನ್ ಪಾಷಾಗೂ ಕೊರೊನಾ ಪಾಸಿಟಿವ್ ಬಂದಿದೆ.
ಬೆಂಗಳೂರಿನ ಮತ್ತೊಬ್ಬ ಕಾರ್ಪೊರೇಟರ್ಗೆ ಕೊರೊನಾ! - ಸಿದ್ಧಾಪುರ ವಾರ್ಡ್
ಇಮ್ರಾನ್ ಪಾಷಾ ಬಳಿಕ ನಗರದ ಮತ್ತೊಬ್ಬ ಪಾಲಿಕೆ ಸದಸ್ಯನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಗೆದಿದ್ದ ಮುಜಾಹಿದ್ದಿನ್ ಪಾಷಾಗೂ ಕೊರೊನಾ ವಕ್ಕರಿಸಿದ್ದು, ಪಾಷಾ ಅವರ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ಕಾರ್ಪೊರೇಟರ್ಗೆ ಕೊರೊನಾ
ಮುಜಾಹಿದ್ದಿನ್ ಪಾಷಾ ಅವರ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿ ಕುಟಂಬದ ಎಂಟು ಜನ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 13 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಇಮ್ರಾನ್ ಪಾಷಾ ಗುಣಮುಖರಾದ ಬೆನ್ನಲ್ಲೇ ಮತ್ತೊಬ್ಬ ಪಾಲಿಕೆ ಸದಸ್ಯನಿಗೆ ಕೊರೊನಾ ಸೋಂಕು ಹರಡಿರುವುದು ಆತಂಕ ಮೂಡಿಸಿದೆ.