ಕರ್ನಾಟಕ

karnataka

ಕ್ವಾಟ್ರಸ್​​ನಲ್ಲಿ ನೆಲೆಸಿರುವ 26 ಪೊಲೀಸ್ ಸಿಬ್ಬಂದಿಗೆ ಕೊರೊನಾ: ಮುನ್ನೆಚ್ಚರಿಕಾ ಕ್ರಮ ಮರೆತ ಬಿಬಿಎಂಪಿ ಅಧಿಕಾರಿಗಳು!

By

Published : Jul 7, 2020, 3:42 PM IST

ಕೊರೊನಾ ಪಾಸಿಟಿವ್ ಬಂದ ಪೊಲೀಸ್​ ಸಿಬ್ಬಂದಿಯನ್ನು ಸಂಬಂಧಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‌ಆದರೆ ಕ್ವಾಟ್ರಸ್ ಬಳಿ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಕ್ವಾಟ್ರಸ್ ಬಳಿ ಇರುವ ಸಿಬ್ಬಂದಿಗಳ ಕುಟುಂಬಸ್ಥರು ಭಯಭೀತರಾಗಿದ್ದಾರೆ.

corona positive
ಕ್ವಾಟ್ರಸ್​​ನಲ್ಲಿ ನೆಲೆಸಿರುವ 26 ಸಿಬ್ಬಂದಿಗಳಿಗೆ ಕೊರೊನಾ

ಬೆಂಗಳೂರು:ಕೊರೊನಾ ವಾರಿಯರ್ಸ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಗಡಿ ರೋಡ್ ಪೊಲೀಸ್ ಕ್ವಾಟ್ರಸ್​​​ನಲ್ಲಿ ನೆಲೆಸಿರುವ ಸುಮಾರು 26 ಮಂದಿ ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಪಾಸಿಟಿವ್ ಬಂದವರನ್ನು ಸಂಬಂಧಿಸಿದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ‌ಆದರೆ ಕ್ವಾಟ್ರಸ್ ಬಳಿ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಕ್ವಾಟ್ರಸ್ ಬಳಿ ಇರುವ ಸಿಬ್ಬಂದಿಗಳ ಕುಟುಂಬಸ್ಥರಲ್ಲಿ ಆತಂಕ ಮೂಡಿದೆ.

ಬಿಬಿಎಂಪಿ ನಿಯಮದ ಪ್ರಕಾರ ಒಂದು‌ ಪಾಸಿಟಿವ್ ಕೇಸ್ ‌ಪತ್ತೆಯಾದರೂ ಕೂಡ ಆ ಪ್ರದೇಶವನ್ನು ಸೀಲ್​ಡೌನ್ ಮಾಡಿ ಜನರ ಓಡಾಟಕ್ಕೆ ಬ್ರೇಕ್ ಹಾಕಬೇಕು. ಆದ್ರೆ ಈ ಪೊಲೀಸ್ ಕ್ವಾಟ್ರಸ್​​ನಲ್ಲಿ​ ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನಾವು ಭಯದಿಂದಲೇ ಕೆಲಸ‌ ಮುಗಿಸಿ‌ ಮನೆಗೆ ಬರುತ್ತೇವೆ. ಆದ್ರೆ, ಕ್ವಾಟ್ರಸ್​ನಲ್ಲಿ ಕೂಡ ನೆಮ್ಮದಿ ಇಲ್ಲವೆಂದರೆ ಹೇಗೆ ಕೆಲಸ ಮಾಡುವುದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಿ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ.

ABOUT THE AUTHOR

...view details