ಕರ್ನಾಟಕ

karnataka

ETV Bharat / state

ಖಾಕಿಯನ್ನ ಬಿಡದ ಕೊರೊನಾ: ಇಂದು ಇಬ್ಬರು ಪೊಲೀಸ್​​ ಸಿಬ್ಬಂದಿಗೆ ಪಾಸಿಟಿವ್ - ಇಬ್ಬರು ಪೊಲೀಸ್​​ ಸಿಬ್ಬಂದಿಗೆ ಕೊರೊನಾ ಸುದ್ದಿ

ಕೆ.ಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸದ್ಯ ಮೂರು ದಿವಸ ಠಾಣೆಯನ್ನ ಸೀಲ್ ಡೌನ್ ಮಾಡಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಪೊಲೀಸ್​​ ಸಿಬ್ಬಂದಿಗೆ ಪಾಸಿಟಿವ್
ಪೊಲೀಸ್​​ ಸಿಬ್ಬಂದಿಗೆ ಪಾಸಿಟಿವ್

By

Published : Jun 28, 2020, 8:23 AM IST

ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕೆಲಸ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಪ್ರತಿದಿನ ಕೊರೊನಾಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮತ್ತೆ ಇಬ್ಬರು ಪೊಲೀಸ್​​ ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ.

ಕೆ.ಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಸದ್ಯ ಮೂರು ದಿವಸ ಠಾಣೆಯನ್ನ ಸೀಲ್ ಡೌನ್ ಮಾಡಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹಾಗೆ ಈ ಇಬ್ಬರ ಸಂಪರ್ಕದಲ್ಲಿದ್ದ ಪೊಲೀಸರನ್ನ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಗಂಟಲ ದ್ರವ ಪರೀಕ್ಷೆಯನ್ನ ಕೂಡ ಮಾಡಲಾಗಿದೆ‌.

ಇವರು 2007 ಮತ್ತು 2005ರ ಬ್ಯಾಚ್​​ನವರಾಗಿದ್ದು ಸದ್ಯ ಹೆಡ್ ಕಾನ್ಸ್​​ಟೇಬಲ್​​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಅನಾರೋಗ್ಯವಿದ್ದ ಕಾರಣ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದರು. ಸದ್ಯ ಕೊರೊನಾ ದೃಢ ಹಿನ್ನೆಲೆಯಲ್ಲಿ ಕೋವಿಡ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details