ಕರ್ನಾಟಕ

karnataka

ETV Bharat / state

ಲಾಲ್ ಬಾಗ್​ಗೂ ಕೊರೊನಾ ಎಂಟ್ರಿ... ವಾಕಿಂಗ್ ಹೋಗ್ತಿದ್ದ ವ್ಯಕ್ತಿಗೆ ವಕ್ಕರಿಸಿದ ಮಹಾಮಾರಿ!

ಲಾಲ್​ಬಾಗ್​ಗೆ ಪ್ರತಿನಿತ್ಯ ವಾಕಿಂಗ್​ ಹೋಗುತ್ತಿದ್ದವರಿಗೆ ಆಘಾತಕಾರಿ​ ಸುದ್ದಿಯೊಂದು ಬಂದಿದೆ. ಪ್ರತಿದಿನ ವಾಕಿಂಗ್​ ಹೋಗ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Lalbhag
Lalbhag

By

Published : Jun 12, 2020, 5:16 PM IST

ಬೆಂಗಳೂರು: ರಾಜ್ಯದಲ್ಲಿ ಸದ್ಯ ಯಾರಿಗೆ ಯಾವಾಗ ಹೇಗೆ ಕೊರೊನಾ ಬರುತ್ತೆ ಅನ್ನೋದೇ ದೊಡ್ಡ ಚಿಂತೆ ಆಗಿದೆ. ಮನುಕುಲಕ್ಕೆ ಸವಾಲಾಗಿರುವ ಕೊರೊನಾ ವೈರಸ್ ಸದ್ಯ ಎಲ್ಲರ ನಿದ್ದೆಗೆಡಿಸಿದ್ದು, ವಾಕಿಂಗ್ ಹೋಗುವವರಿಗೂ ಭಯ ಹುಟ್ಟಿಸುತ್ತಿದೆ.

ಅಂದಹಾಗೇ ಲಾಲ್ ಬಾಗ್​ಗೆ ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ವ್ಯಕ್ತಿಗೆ ಸೋಂಕು ತಗುಲಿದ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. 50 ವರ್ಷದ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟಿದ್ದು, ಇವರು ನಿತ್ಯ ವಾಕಿಂಗ್​ಗೆ ಲಾಲ್ ಬಾಗ್​ಗೆ ಹೋಗುತ್ತಿದ್ದ ಎನ್ನಲಾಗ್ತಿದೆ. ಸದ್ಯ ಇವರ ಸಂಪರ್ಕದಲ್ಲಿರುವ ವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಸದ್ಯ ವಾಕಿಂಗ್, ಜಾಗಿಂಗ್ ಅಂತ ಹೋಗುವಾಗ ಎಚ್ಚರಿಕೆಯಿಂದ ಇರಿ ಅಂತ ವೈದ್ಯರು ಸಾರ್ವಜನಿಕರಿಗೆ ಸಲಹೆ ನೀಡುತ್ತಿದ್ದಾರೆ.

ಜಯನಗರ ಆಸ್ಪತ್ರೆ ಹೌಸ್ ಕೀಪಿಂಗ್​ ವ್ಯಕ್ತಿಗೂ ಕೊರೊನಾ

ಜಯನಗರ ಜನರಲ್ ಆಸ್ಪತ್ರೆಯ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸೀಲ್ ಡೌನ್ ಮಾಡಿ ಇಡೀ ಆಸ್ಪತ್ರೆಯನ್ನೇ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇತ್ತ, ಸ್ಯಾನಿಟೈಸ್ ಬಳಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮುಂದುವರಿಯಲಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 16 ಮಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ.

ABOUT THE AUTHOR

...view details