ಕರ್ನಾಟಕ

karnataka

ETV Bharat / state

ಅಣ್ಣನ ಅಗಲಿಕೆ ದುಃಖದಲ್ಲಿರುವ ನಟ ಧ್ರುವ ಸರ್ಜಾ ದಂಪತಿಗೆ ಕೊರೊನಾ! - Corona positive for Actor Dhruva Sarja and his wife

ಕೋವಿಡ್​​​​ ಕುರಿತಂತೆ ಟ್ವೀಟ್​ ಮಾಡಿರುವ ಧ್ರುವ ಸರ್ಜಾ, ನನಗೆ ಹಾಗೂ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿನ ಲಕ್ಷಣ ಇದ್ದ ಕಾರಣ ಕೊರೊನಾ ಪರೀಕ್ಷೆ ಮಾಡಿಸಿದ್ವಿ. ಸದ್ಯ ನಾವಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದೇವೆ ಎಂದಿದ್ದಾರೆ.

Corona positive for Actor Dhruva Sarja and his wife
ನಟ ಧ್ರುವ ಸರ್ಜಾ ದಂಪತಿಗೆ ಕೊರೊನಾ

By

Published : Jul 15, 2020, 3:09 PM IST

Updated : Jul 15, 2020, 3:36 PM IST

ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್​ ಬಂದಿದೆ. ಸ್ವತಃ ಈ ವಿಷಯವನ್ನು ಧ್ರುವ ಸರ್ಜಾ ಟ್ವೀಟ್​ ಮೂಲಕ ಖಚಿಸಿಪಡಿಸಿದ್ದಾರೆ.

ಈ ಕುರಿತಂತೆ ಟ್ವೀಟ್​ ಮಾಡಿರುವ ಧ್ರುವ ಸರ್ಜಾ, ನನಗೆ ಹಾಗೂ ಪತ್ನಿ ಪ್ರೇರಣಾಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕಿನ ಲಕ್ಷಣ ಇದ್ದ ಕಾರಣ ಕೊರೊನಾ ಪರೀಕ್ಷೆ ಮಾಡಿಸಿದ್ವಿ. ಸದ್ಯ ನಾವಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದೇವೆ ಎಂದಿದ್ದಾರೆ. ಅಲ್ಲದೇ ತಮ್ಮ ಸಂಪರ್ಕದಲ್ಲಿದ್ದವರು ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೆ ನಟಿ, ಸಂಸದೆ ಸುಮಲತಾ ಅಂಬರೀಶ್, ನಟ ಮತ್ತು ನಿರ್ಮಾಪಕ ರಾಕ್​​ಲೈನ್ ವೆಂಕಟೇಶ್​ಗೆ ಕೊರೊನಾ ಸೋಂಕು ತಗುಲಿದ್ದು, ಸ್ಯಾಂಡಲ್​ವುಡ್​​ನಲ್ಲಿ ಆತಂಕ ಸೃಷ್ಟಿಸಿದೆ.

Last Updated : Jul 15, 2020, 3:36 PM IST

ABOUT THE AUTHOR

...view details