ಕರ್ನಾಟಕ

karnataka

ETV Bharat / state

ಸಿಎಂ ಬಿಎಸ್​ವೈ ಸಂಪುಟಕ್ಕೆ ಕೊರೊನಾ ಕಾಟ ; ಈವರೆಗೂ ಸೋಂಕು ತಗುಲಿರೋದ್ಯಾರಿಗೆ!? - Corona positive for 19 BJP ministers

ಸಿಎಂ ಸೇರಿದಂತೆ ಸಚಿವರು ನಿರಂತರವಾಗಿ ಸಭೆ, ಸಮಾರಂಭಗಳು ಹಾಗೂ ಸಾರ್ವಜನಿಕ ಸಂಪರ್ಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಸುಲಭವಾಗಿ ಕೊರೊನಾ ಸೋಂಕಿಗೆ ಸಿಲುಕುತ್ತಿದ್ದಾರೆ..

B.S.Yadiyurappa
ಬಿ.ಎಸ್.ಯಡಿಯೂರಪ್ಪ

By

Published : Oct 6, 2020, 6:49 PM IST

Updated : Oct 6, 2020, 7:14 PM IST

ಬೆಂಗಳೂರು: ಕೊರೊನಾ ವೈರಸ್‌ ದಾಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟದ ಮೂರನೇ ಎರಡು ಭಾಗ ಸಿಲುಕಿದೆ. ಕೇವಲ 9 ಸಚಿವರು ಮಾತ್ರ ಈವರೆಗೂ ಸೋಂಕಿಗೆ ಸಿಲುಕದೆ ದೂರ ಉಳಿದಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟದ 34 ಸಚಿವ ಸ್ಥಾನದಲ್ಲಿ 28 ಸ್ಥಾನಗಳು ಭರ್ತಿಯಾಗಿವೆ. ಅದರಲ್ಲಿ 19 ಸಚಿವರು ಈವರೆಗೆ ಕೋವಿಡ್ ವಿರುದ್ಧ ಗೆದ್ದು ಬಂದಿದ್ದಾರೆ. 9 ಸಚಿವರು ಮಾತ್ರ ಕೊರೊನಾ ಸೋಂಕಿಗೆ ಸಿಲುಕದೆ ದೂರ ಉಳಿದಿದ್ದಾರೆ. 9 ಸಚಿವರೊಳಗೆ ಮೂವರು ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣದಿಂದ ಹೋಂ ಕ್ವಾರಂಟೈನ್ ಆಗಿದ್ದಾರೆ. ಆರು ಸಚಿವರು ಮಾತ್ರ ಕೊರೊನಾ ಸೋಂಕು ಮತ್ತು ಸೋಂಕಿತರಿಂದ ದೂರ ಉಳಿದಿದ್ದಾರೆ.

ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನಾ ಸೋಂಕಿಗೆ ಸಿಲುಕಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಬಂದಿದ್ದಾರೆ. ಈಶ್ವರಪ್ಪ, ಗೋಪಾಲಯ್ಯ ಕೂಡ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಾತ್ರ ಸರ್ಕಾರಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕೊರೊನಾ ಪಾಸಿಟಿವ್ ದೃಢ ಪಟ್ಟವರು

ಇನ್ನುಳಿದ ಸಚಿವರು ಮನೆಯಲ್ಲಿಯೇ ಹೋಂ ಐಸೋಲೇಷನ್​ಗೆ ಒಳಗಾಗಿ ಗುಣಮುಖರಾಗಿದ್ದಾರೆ. ಸದ್ಯ ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಜೆ ಸಿ ಮಾಧುಸ್ವಾಮಿ, ಸುರೇಶ್ ಕುಮಾರ್ ಹೋಂ ಐಸೋಲೇಷನ್​ನಲ್ಲಿದ್ದಾರೆ. ಸಿಎಂ ಸೇರಿದಂತೆ ಸಚಿವರು ನಿರಂತರವಾಗಿ ಸಭೆ, ಸಮಾರಂಭಗಳು ಹಾಗೂ ಸಾರ್ವಜನಿಕ ಸಂಪರ್ಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಸುಲಭವಾಗಿ ಕೊರೊನಾ ಸೋಂಕಿಗೆ ಸಿಲುಕುತ್ತಿದ್ದಾರೆ. ಬಹುತೇಕ ಎಲ್ಲರೂ ರೋಗ ಲಕ್ಷಣ ರಹಿತ ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾ ಪಾಸಿಟಿವ್ ದೃಢ ಪಟ್ಟವರು

ಕೊರೊನಾ ಪಾಸಿಟಿವ್ ದೃಢ ಪಟ್ಟ ಸಚಿವರು :

* ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ
* ಡಿಸಿಎಂ ಗೋವಿಂದ ಕಾರಜೋಳ
* ಡಿಸಿಎಂ ಸಿ ಎನ್ ಅಶ್ವತ್ಥ್‌ ನಾರಾಯಣ
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಕೆ ಎಸ್ ಈಶ್ವರಪ್ಪ
* ಆರೋಗ್ಯ ಸಚಿವ ಬಿ ಶ್ರೀರಾಮುಲು
* ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್
* ಪ್ರವಾಸೋದ್ಯಮ ಸಚಿವ ಸಿ ಟಿ ರವಿ
* ಗೃಹ ಸಚಿವ ಬಸವರಾಜ ಬೊಮ್ಮಾಯಿ
* ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ
* ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ
* ಸಹಕಾರ ಸಚಿವ ಎಸ್ ಟಿ ಸೋಮಶೇಖರ್
* ಅರಣ್ಯ ಸಚಿವ ಆನಂದ್ ಸಿಂಗ್
* ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್
* ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್
* ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
* ಕೃಷಿ ಸಚಿವ ಬಿ ಸಿ ಪಾಟೀಲ್
* ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ
* ಜವಳಿ ಸಚಿವ ಶ್ರೀಮಂತ ಪಾಟೀಲ್

ಕೊರೊನಾ ಸೋಂಕಿಗೆ ಸಿಲುಕದ ಸಚಿವರು :

* ಡಿಸಿಎಂ ಲಕ್ಷ್ಮಣ ಸವದಿ
* ಕಂದಾಯ ಸಚಿವ ಆರ್.ಅಶೋಕ್
* ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್
* ವಸತಿ ಸಚಿವ ವಿ.ಸೋಮಣ್ಣ
* ಮುಜಿರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ
* ಗಣಿ,ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಸಿ ಸಿ ಪಾಟೀಲ್
* ಅಬಕಾರಿ ಸಚಿವ ಹೆಚ್ ನಾಗೇಶ್
* ಜಲಸಂಪನ್ಮೂಲ‌ ಸಚಿವ ರಮೇಶ್ ಜಾರಕಿಹೊಳಿ
* ತೋಟಗಾರಿಕಾ ಸಚಿವ ಕೆ ಸಿ ನಾರಾಯಣಗೌಡ

Last Updated : Oct 6, 2020, 7:14 PM IST

ABOUT THE AUTHOR

...view details