ಕರ್ನಾಟಕ

karnataka

ETV Bharat / state

ಹೊಂಗಸಂದ್ರದಲ್ಲಿ ಮತ್ತೆ ಕೊರೊನಾರ್ಭಟ: ಅಧಿಕಾರಿಗಳ ತಲೆ ಕೆಡಿಸಿದ ಪ್ರಯಾಣದ ಇತಿಹಾಸ - Hongasandra case

ಬೆಂಗಳೂರು ಬೆನ್ನುಬಿದ್ದ ಕೊರೊನಾ ಮತ್ತೆ ಕಾಡಲಾರಂಭಿಸಿದೆ. ಹೊಂಗಸಂದ್ರದಲ್ಲಿ ಇಂದು ಮತ್ತೆ ಕೊರೊನಾ ಪಾಸಿಟಿವ್​ ಪತ್ತೆಯಾಗಿದ್ದು ಸ್ಥಳದಲ್ಲಿ ಅಧಿಕಾರಿಗಳ ದಂಡು ಬೀಡುಬಿಟ್ಟಿದೆ.

Again Corona Positive Detect In Hongasandra
ಸಂಗ್ರಹ ಚಿತ್ರ

By

Published : May 12, 2020, 6:48 PM IST

ಬೆಂಗಳೂರು:ಹೊಂಗಸಂದ್ರ ವಾರ್ಡ್​ನಲ್ಲಿ ಮತ್ತೆ ಕೊರೊನಾ ಕೇಕೆ ಹಾಕುತ್ತಿದೆ. ಬೊಮ್ಮನಹಳ್ಳಿ ವಲಯದ ಹೊಂಗಸಂದ್ರಕ್ಕೆ ಮೊದಲು ಬಿಹಾರಿ ವಲಸೆ ಕಾರ್ಮಿಕನಿಂದ ಕೊರೊನಾ ಪತ್ತೆಯಾಗಿತ್ತು. ಬಳಿಕ 35 ಜನರಿಗೆ ಪಸರಿಸಿ, ಪಕ್ಕದ ಮಂಗಮ್ಮನಪಾಳ್ಯದ ನಿವಾಸಿ P-654 ಸಂಖ್ಯೆಯಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇದೀಗ ಮಂಗಮ್ಮನಪಾಳ್ಯದ ಮತ್ತೊಬ್ಬ ನಿವಾಸಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

35 ವರ್ಷದ P-911 ಸಂಖ್ಯೆಯ ವ್ಯಕ್ತಿಯಲ್ಲಿ ಪಾಸಿಟಿವ್​ ಕಾಣಿಸಿಕೊಂಡಿದ್ದು ಈತ ಗೂಡ್ಸ್ ಆಟೋ ಚಾಲಕರಾಗಿದ್ದರು. ಲಾಕ್​​ಡೌನ್ ವೇಳೆ ಮನೆಯಲ್ಲೇ ಇದ್ದರೂ ಕೊರೊನಾ ಹರಡಿದೆ ಎನ್ನಲಾಗುತ್ತಿದೆ. ಅಲ್ಲದೆ, ಈ ವ್ಯಕ್ತಿಗೆ 654 ರೋಗಿಯ ಪರಿಚಯವೂ ಇಲ್ಲ, ಸಂಪರ್ಕವೂ ಇರಲಿಲ್ಲ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ಆರೋಗ್ಯಾಧಿಕಾರಿ ಡಾ.ಸುರೇಶ್ ತಿಳಿಸಿದ್ದಾರೆ. ಆದರೆ, ಯಾರ ಸಂಪರ್ಕವಿಲ್ಲದ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿದ್ದಕ್ಕೆ ಅಧಿಕಾರಿಗಳು ಈ ಬಗ್ಗೆ ತಲೆಬಿಸಿ ಮಾಡಿಕೊಂಡಿದ್ದಾರೆ. ಹಾಗಾಗಿ ಪತ್ತೆ ಕಾರ್ಯ ಶುರುವಿಟ್ಟಿದ್ದಾರೆ.

ಹೊಂಗಸಂದ್ರದಲ್ಲಿ ಮತ್ತೆ ಕೊರೊನಾ ಪತ್ತೆ

ಇನ್ನು ಅಧಿಕಾರಿಗಳು ಆತನ ಮನೆಯವರನ್ನೂ ಕ್ವಾರಂಟೈನ್ ಮಾಡಿದ್ದಾರೆ. ಆದರೂ ಕೊರೊನಾ ಸೋಂಕಿತ ಮಂಗಮ್ಮನಪಾಳ್ಯದ ನಿವಾಸಿ P-654 ವ್ಯಕ್ತಿಯ ಸಂಪರ್ಕದ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ನಾಲ್ಕು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಮೂರು ಪಾದರಾಯನಪುರ ಹಾಗೂ ಒಂದು ಹೊಂಗಸಂದ್ರದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ABOUT THE AUTHOR

...view details