ಆನೇಕಲ್:ತಾಲೂಕಿನ ದಕ್ಷಿಣಕ್ಕೆ ಭಾಗಕ್ಕೂ ಕೊರೊನಾ ಮಹಾಮಾರಿ ಕಾಲಿಡಲು ಶುರು ಮಾಡಿದೆ.
ಅಪಾರ್ಟ್ಮೆಂಟ್ಗೆ ಕಾಲಿಟ್ಟ ಕೊರೊನಾ... ವ್ಯಕ್ತಿಯಲ್ಲಿ ಸೋಂಕು ಪತ್ತೆ - poorva Panorama Apartments
ಆನೇಕಲ್ನ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಪೂರ್ವ ಪನೋರಮ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಪಾಸಿಟಿವ್ ಒಂದು ದೃಢಪಟ್ಟಿದೆ. 40 ವರ್ಷದ ವ್ಯಕ್ತಿಗೆ ಕಾಣಿಸಿಕೊಂಡಿರುವ ಪಾಸಿಟಿವ್ ಕೇಸ್ನಿಂದ ಅಪಾರ್ಟ್ಮೆಂಟ್ ನಿವಾಸಿಗಳು ಭಯಭೀತರಾಗಿದ್ದಾರೆ.
![ಅಪಾರ್ಟ್ಮೆಂಟ್ಗೆ ಕಾಲಿಟ್ಟ ಕೊರೊನಾ... ವ್ಯಕ್ತಿಯಲ್ಲಿ ಸೋಂಕು ಪತ್ತೆ Bangalore](https://etvbharatimages.akamaized.net/etvbharat/prod-images/768-512-7612813-1001-7612813-1592129054195.jpg)
ಕೊರೊನಾ ಪಾಸಿಟಿವ್ ಪತ್ತೆ
ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಒಂದು ಕೊರೊನಾ ಪಾಸಿಟಿವ್ ಪತ್ತೆ
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಪೂರ್ವ ಪನೋರಮ ಅಪಾರ್ಟ್ಮೆಂಟ್ನಲ್ಲಿ ಒಂದು ಕೊರೊನಾ ಕೇಸ್ ದೃಢಪಟ್ಟಿದೆ. 40 ವರ್ಷದ ವ್ಯಕ್ತಿಗೆ ಕಾಣಿಸಿಕೊಂಡಿರುವ ಕೊರೊನಾ ಪಾಸಿಟಿವ್ ಕೇಸ್ನಿಂದ ಅಪಾರ್ಟ್ಮೆಂಟ್ ನಿವಾಸಿಗಳು ಭಯಭೀತರಾಗಿದ್ದಾರೆ.
ತಮಿಳುನಾಡಿನಿಂದ ಬಂದ ವ್ಯಕ್ತಿಗೆ ಪರೀಕ್ಷಾ ಫಲಿತಾಂಶದಲ್ಲಿ ಸೋಂಕು ಕಾತರಿಯಾಗಿದ್ದು, ಇದೀಗ 704 ಪ್ಲಾಟ್ ನಂಬರ್, ಇ- ಬ್ಲಾಕ್ 650 ಫ್ಲಾಟ್ಗಳನ್ನು ಹೊಂದಿರುವ ಪೂರ್ವ ಪನೋರಮ ಅಪಾರ್ಟ್ಮೆಂಟ್ ಇಡೀ ಪನೋರಮಾ ಅಪಾರ್ಟ್ಮೆಂಟ್ಗೆ ಸ್ಯಾನಿಟೈಸರ್ ಸಿಂಪಡಿಸಿ ಸುತ್ತಲೂ ಬ್ಲೀಚಿಂಗ್ ಮಾಡಿಸಲಾಗಿದೆ. ಸ್ಥಳಕ್ಕೆ ಕೊರೊನಾ ವಾರಿಯರ್ಸ್ಗೆ ಆಗಮಿಸಿ ಪರಿಶೀಲಿಸಿದರು.