ಬೆಂಗಳೂರು:ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಂದೆಗೆ ಕೊರೊನಾ ಪಾಸಿಟವ್ ದೃಢಪಟ್ಟಿದ್ದು, ಈ ಕುರಿತು ಸ್ವತಃ ಸುಧಾಕರ್ ಅವರೇ ಟೀಟ್ವ್ ಮೂಲಕ ತಿಳಿಸಿದ್ದಾರೆ.
ಸಚಿವ ಸುಧಾಕರ್ ತಂದೆಗೆ ಕೊರೊನಾ ಪಾಸಿಟಿವ್; ಇತರೆ ಮನೆ ಸದಸ್ಯರ ವರದಿಯ ನಿರೀಕ್ಷೆಯಲ್ಲಿ ಸುಧಾಕರ್.. - ಶಿಕ್ಷಣ ಸಚಿವ ಸುಧಾಕರ್ ತಂದೆಗೆ ಕೊರೊನಾ
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಂದೆಗೆ ಕೊರೊನಾ ಪಾಸಿಟವ್ ದೃಢಪಟ್ಟಿದ್ದು, ಈ ಕುರಿತು ಸ್ವತಃ ಸುಧಾಕರ್ ಅವರೇ ಟೀಟ್ವ್ ಮೂಲಕ ತಿಳಿಸಿದ್ದಾರೆ.
ಸುಧಾಕರ್ ತಂದೆಗೆ ಕೊರೊನಾ
82 ವರ್ಷದ ನನ್ನ ತಂದೆಯವರಿಗೆ ಜ್ವರ ಕೆಮ್ಮು ಸಮಸ್ಯೆ ಕಂಡು ಬಂದ ಹಿನ್ನೆಲೆ, ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಧ್ಯಾಹ್ನ ಟೀಟ್ವ್ ಮಾಡಿದ್ದರು. ಇದೀಗ ಸೋಂಕು ದೃಢಪಟ್ಟಿರುವ ಬಗ್ಗೆಯೂ ತಿಳಿಸಿದ್ದಾರೆ.
ಸುಧಾಕಾರ್ ಮನೆಯ ಅಡುಗೆ ಕೆಲಸದವನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಅವರಿಂದ ಸೋಂಕು ತಗುಲಿರುವ ಅನುಮಾನ ಇದೆ. ಈ ಕಾರಣಕ್ಕೆ ಸುಧಾಕರ್ ತಂದೆಗೆ ಕೊರೊನಾ ತಪಾಸಣೆ ಮಾಡಿಸಲಾಗಿತ್ತು. ಸದ್ಯ ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.