ಬೆಂಗಳೂರು:ರಾಜ್ಯದಲ್ಲಿ ಇವತ್ತು 10 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 207 ತಲುಪಿದೆ.
ಟ್ರಾವೆಲ್ ಹಿಸ್ಟರಿ ಹೀಗಿದೆ:
ಬೆಂಗಳೂರು:ರಾಜ್ಯದಲ್ಲಿ ಇವತ್ತು 10 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 207 ತಲುಪಿದೆ.
ಟ್ರಾವೆಲ್ ಹಿಸ್ಟರಿ ಹೀಗಿದೆ:
*ರೋಗಿ 198: ಬೆಂಗಳೂರಿನ 48 ವರ್ಷ ವಯಸ್ಸಿನ ವ್ಯಕ್ತಿಗೆ ಕೊರೊನಾ ಸೋಂಕು. P-167,168 ಜೊತೆಗೆ ಈ ವ್ಯಕ್ತಿ ಸಂಪರ್ಕ ಹೊಂದಿದ್ದರು. ಇವರಿಗೆ ಬೆಂಗಳೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-199: 57 ವರ್ಷದ ವ್ಯಕ್ತಿಗೆ ಸೋಂಕು. ರೋಗಿ 167-168 ರ ಜೊತೆ ಸಂಪರ್ಕ ಹೊಂದಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-200: ಮೈಸೂರಿನ 8 ವರ್ಷದ ಹುಡುಗನಿಗೂ ಸೋಂಕು. ರೋಗಿ-103, 159 ರ ಮಗನಾಗಿದ್ದು, ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-201: ಮೈಸೂರಿನ 48 ವರ್ಷದ ಮಹಿಳೆಗೆ ಕೊರೊನಾ ಸೋಂಕು. ಇವರು ರೋಗಿ 103ರ ಅತ್ತೆಯಾಗಿದ್ದು, ಇವರ ಸಂಪರ್ಕ ದಿಂದ ಸೋಂಕು ಬಂದಿದೆ. ಮೈಸೂರಿನಲ್ಲೇ ಚಿಕಿತ್ಸೆ ನಡೆಯುತ್ತಿದೆ.
*ರೋಗಿ-202:ಮೈಸೂರಿನ 33 ವರ್ಷದ ವ್ಯಕ್ತಿಗೆ ಸೋಂಕು. ರೋಗಿ-111ರ ಸಂಪರ್ಕ ಹೊಂದಿದ್ದು, ಈತ ಫಾರ್ಮಾ ಕಂಪನಿಯ ಉದ್ಯೋಗಿಯಾಗಿದ್ದಾನೆ. ಮೈಸೂರಿನಲ್ಲಿ ಚಿಕಿತ್ಸೆ ನಡೆಯುತ್ತಿದೆ.
*ರೋಗಿ-203: 28 ವರ್ಷದ ಮಹಿಳೆಗೆ ಸೋಂಕು. ಇವರು ರೋಗಿ 85 ರ ಪತ್ನಿ. ಮೈಸೂರಿನಲ್ಲಿ ಚಿಕಿತ್ಸೆ.
*ರೋಗಿ- 204: 48 ವರ್ಷದ ಮಹಿಳೆ ಮೈಸೂರು ನಿವಾಸಿಯಾಗಿದ್ದು, ರೋಗಿ 183ರ ಪತ್ನಿಯಾಗಿದ್ದು ಸೋಂಕು ತಗುಲಿದೆ. ಮೈಸೂರಿನಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-205: ಕಲಬುರಗಿಯ 55 ವರ್ಷದ ವ್ಯಕ್ತಿಗೆ ಸೋಂಕು. ದೆಹಲಿಯಿಂದ ಹಿಂದಿರುಗಿರುವ ನೆಗೆಟಿವ್ ಪ್ರಕರಣದ ಸಂಪರ್ಕ ಹೊಂದಿದ್ದು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಲರ್ಬುಗಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-206: 35 ವರ್ಷದ ವ್ಯಕ್ತಿಗೆ ಸೋಂಕು ತಗಲಿದ್ದು, ಇವರು ಬೆಂಗಳೂರು ಗ್ರಾಮಾಂತರ ನಿವಾಸಿಯಾಗಿದ್ದು, P-169 ರ ಸಹೋದರನಾಗಿದ್ದು, ಆತನ ಸಂರ್ಪಕ ಹೊಂದಿದ್ದಾನೆ. ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
*ರೋಗಿ-207:ಬೆಂಗಳೂರು ಗ್ರಾಮಾಂತರದಲ್ಲಿ 11 ವರ್ಷದ ಬಾಲಕಿಗೆ ಸೋಂಕು ತಗುಲಿದ್ದು, ರೋಗಿ 206 ರ ಮಗಳಾಗಿದ್ದು, ಸದ್ಯ ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.