ಬೆಂಗಳೂರು: ಕೊರೊನಾ ಸೋಂಕಿತರ ಕಾಲು ಕೈ ಕಟ್ಟಿರುವುದನ್ನು ನಾನು ನೋಡಿದ್ದೇನೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅವರು, ಬಳಿಕ ಮಾತನಾಡಿ, ಐಸಿಯುನಲ್ಲಿ ಕೊರೊನಾ ಸೋಂಕಿತರು ಸಾಯುತ್ತಿರುವುದು ಹೆಚ್ಚಾಗಿದೆ. ಸೋಂಕಿತರ ಕೈ ಕಾಲು ಕಟ್ಟಿ ಹಾಕಲಾಗುತ್ತಿದೆ. ಡಾಕ್ಟರ್ಸ್ ಕಡಿಮೆ ಇದ್ದು, ಪೇಶೆಂಟ್ಗಳು ಎದ್ದು ಓಡಾಡುತ್ತಾರೆ ಎಂದು ಕೈಕಾಲು ಕಟ್ಟಿಹಾಕುತ್ತಿದ್ದಾರೆ. ನಮ್ಮ ತಂದೆಯನ್ನ ಸೇರಿಸಿದ್ದಾಗ ನಾನೇ ನೋಡಿದ್ದೇನೆ. ಇದನ್ನೇ ಸಭೆಯಲ್ಲಿ ತಿಳಿಸಿದ್ದೇನೆ ಎಂದರು.
ಇದೇ ವೇಳೆ ಮಾತನಾಡಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಖಾಸಗಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆದಿದೆ. ಕೆಲವು ಕಡೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂಬ ಆರೋಪ ಇದೆ. ನಮ್ಮ ಕಮಿಟಿ ಸದಸ್ಯರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ಗೆ ಸೂಚಿಸಿದ್ದೇವೆ. ಸಿಸಿಟಿವಿ ಮೂಲಕ ರೋಗಿಯನ್ನು ಮಾನಿಟರ್ ಮಾಡಬೇಕು. ಊಟ, ತಿಂಡಿ ಟ್ರೀಟ್ಮೆಂಟ್ ಬಗ್ಗೆ ಸಿಸಿಟಿವಿ ಮೂಲಕ ಮಾನಿಟರ್ ಮಾಡಬೇಕು. ಬಿಐಇಸಿಯ ಕೋವಿಡ್ ಕೇರ್ ಸೆಂಟರ್ನಲ್ಲಿ 15 ಜನಕ್ಕೆ ಒಂದು ಟಾಯ್ಲೆಟ್ ಮಾಡಿದ್ದಾರೆ. ಇದು ಸರಿಯಲ್ಲ,ಮೊದಲು 10 ಜನರಿಗೆ ಇತ್ತು ಎಂದು ವಿವರಿಸಿದರು.
ಕೊರೊನಾ ಸೋಂಕಿತರಿಗೆ ಕೈಕಾಲು ಕಟ್ಟಿ ಚಿಕಿತ್ಸೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮ್ಮ ಸದಸ್ಯರು ಗಮನಕ್ಕೆ ತಂದಿದ್ದಾರೆ. ಆದರೆ ಬಿಬಿಎಂಪಿ ಆಯುಕ್ತರು ಅದನ್ನು ಇಲ್ಲವೆಂದಿದ್ದಾರೆ. ಆದರೂ ನಾವು ಅವರ ಗಮನಕ್ಕೆ ತಂದಿದ್ದೇವೆ. ಇಂಥ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದೇವೆ ಎಂದರು.
ವಿಶೇಷ ಆಡಿಟ್ ಮಾಡಲು ತೀರ್ಮಾನ: