ETV Bharat Karnataka

ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಜುಲೈ. 3ರಂದು ನಡೆಯಬೇಕಿದ್ದ ಜಿಲ್ಲಾ ನ್ಯಾಯಾಧೀಶರ ಸಂದರ್ಶನ ಮುಂದೂಡಿಕೆ - interview of District Judge to be held on July.3rd

ಜುಲೈ. 3ರಂದು 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ನಡೆಯಬೇಕಾಗಿದ್ದ, ನೇರ ನೇಮಕಾತಿ ಸಂದರ್ಶನವನ್ನು ಮುಂದೂಡಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್‌ ಪ್ರಕಟಣೆ ಹೊರಡಿಸಿದ್ದಾರೆ.

ಹೈಕೋರ್ಟ್
ಹೈಕೋರ್ಟ್
author img

By

Published : Jul 1, 2020, 8:41 PM IST

ಬೆಂಗಳೂರು:ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಜುಲೈ. 3ರಂದು ನಡೆಯಬೇಕಿದ್ದ ಸಂದರ್ಶನವನ್ನು‌ ಹೈಕೋರ್ಟ್ ಮುಂದೂಡಿದೆ. ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿ ಅವರ ನಿರ್ದೇಶನ‌ದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್‌ ಪ್ರಕಟಣೆ ಹೊರಡಿಸಿದ್ದಾರೆ.

ಜುಲೈ. 3ರಂದು 21 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ನಡೆಯಬೇಕಾಗಿದ್ದ, ನೇರ ನೇಮಕಾತಿ ಸಂದರ್ಶನವನ್ನು ಮುಂದೂಡಲಾಗಿದೆ.‌‌ ಪರಿಷ್ಕೃತ ದಿನಾಂಕ ಹಾಗೂ ಸಮಯವನ್ನು ಮಂದಿನ ದಿನಗಳಲ್ಲಿ ಹೈಕೋರ್ಟ್ ಅಧಿಕೃತ ವೆಬ್ ಸೈಟ್​ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

21 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳ ಸಂದರ್ಶನಕ್ಕೆ ಅರ್ಹರಾಗಿದ್ದ ಅಭ್ಯರ್ಥಿಗಳ‌ ಪಟ್ಟಿಯನ್ನು ಜೂನ್. 25ರಂದು ಪ್ರಕಟಿಸಿದ್ದ ಹೈಕೋರ್ಟ್, ಜುಲೈ 3 ರಂದು ಮಧ್ಯಾಹ್ನ 2.30ಕ್ಕೆ ಸಂದರ್ಶನ ನಿಗದಿಪಡಿಸಿತ್ತು.

ಕಲಬುರಗಿ ಹೈಕೋರ್ಟ್ ಸಂಕೀರ್ಣಕ್ಕೆ ಸ್ಯಾನಿಟೈಸ್: ಕೊರೊನಾ‌ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ‌ ಕಲಬುರಗಿ ಹೈಕೋರ್ಟ್ ಸಂಕೀರ್ಣವನ್ನು ಸ್ಯಾನಿಟೈಸ್ ಮಾಡಬೇಕಾದ ಕಾರಣ, ಬುಧವಾರ ಮಧ್ಯಾಹ್ನ 1.30ರಿಂದ ಗುರುವಾರ ಮಧ್ಯಾಹ್ನ 2.30ರವರೆಗೆ ಕಲಬುರಗಿ ನ್ಯಾಯಪೀಠದ‌ ಕಲಾಪ ಹಾಗೂ ಆಡಳಿತ ಕಾರ್ಯಗಳನ್ನು ಅಮಾನತು ಮಾಡಿ‌ ನೋಟಿಸ್ ಪ್ರಕಟಿಸಲಾಗಿದೆ.

ABOUT THE AUTHOR

...view details