ಬೆಂಗಳೂರು:ಕೊರೊನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಡಿಸ್ಜಾರ್ಜ್ ಆಗಿದ್ದಾರೆ. ಅಕ್ಟೋಬರ್ 5 ರಂದು ಕೊರೊನಾ ಸೋಂಕು ತಗುಲಿತ್ತು. ಸೋಂಕು ದೃಢಪಟ್ಟ ಬಳಿಕ ಮನೆಯಲ್ಲೇ ಹೋಂ ಐಸೊಲೇಷನ್ನಲ್ಲಿ ಇದ್ದರು.
ಕೊರೊನಾದಿಂದ ಗುಣಮುಖರಾದ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ - ಸಚಿವ ಸುರೇಶ್ ಕುಮಾರ್ ಆಸ್ಪತ್ರೆಯಿಂದ ಡಿಸ್ಜಾರ್ಜ್
ಕೊರೊನಾ ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವ ಸುರೇಶ್ ಕುಮಾರ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
![ಕೊರೊನಾದಿಂದ ಗುಣಮುಖರಾದ ಸಚಿವ ಸುರೇಶ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ Suresh Kumar](https://etvbharatimages.akamaized.net/etvbharat/prod-images/768-512-9218981-thumbnail-3x2-chaiii.jpg)
ಆದರೆ, ಅಕ್ಟೋಬರ್ 10 ರಂದು ಉಸಿರಾಟದಲ್ಲಿ ವ್ಯತ್ಯಾಸ ಆದ ಕಾರಣ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸೂಚನೆ ಮೇರೆಗೆ ಶ್ವಾಸಕೋಶ ಸಿಟಿ ಸ್ಕ್ಯಾನ್ ಮಾಡಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿರುವುದು ತಿಳಿದು ಬಂತು ಅಂತ ಸಚಿವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.
ಕಳೆದ 8 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಡಾ ಶಶಾಂಕ್, ಡಾ ಶ್ರೀನಾಥ್, ಡಾ ಪೂರ್ಣಪ್ರಸಾದ್, ಡಾ ಕೃಪೇಶ್ ಹಾಗೂ ಎಲ್ಲ ದಾದಿಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ವೈದ್ಯರು ಇನ್ನು ಎರಡು ವಾರಗಳ ಕಾಲ ಮನೆಯಿಂದ ಹೊರಗೆ ಹೋಗಬಾರದು ಸೂಚನೆ ನೀಡಿದ್ದು, ಮನೆಯಲ್ಲೇ ಕೆಲ ಚಿಕಿತ್ಸೆ ಮುಂದುವರೆಯಲಿದೆ ಅಂತ ತಿಳಿಸಿದ್ದಾರೆ.