ಬೆಂಗಳೂರು:ನಗರದಲ್ಲಿ ಇಂದು 2,802 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದರೆ, 23 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 79,840ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿಂದು 2,802 ಕೋವಿಡ್ ಪ್ರಕರಣಗಳು ಪತ್ತೆ... 23 ಮಂದಿ ಬಲಿ - corona patients in bengaluru
ಸಿಲಿಕಾನ್ ಸಿಟಿಯಲ್ಲಿಂದು ಹೊಸದಾಗಿ 2,802 ಪ್ರಕರಣಗಳು ಪತ್ತೆಯಾಗಿದ್ದರೆ 23 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ನಗರದಲ್ಲಿ ಮಹಾಮಾರಿ ಕೋವಿಡ್ ಸೋಂಕಿಗೆ 1,316 ಮಂದಿ ಬಲಿಯಾಗಿದ್ದಾರೆ.
ಬೆಂಗಳೂರು ಕೊರೊನಾ
ಗುಣಮುಖರಾದವರ ಪ್ರಮಾಣ ಶೇಕಡಾ 56.41ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33,489 ಆಗಿದೆ. ಇಂದು 23 ಸೋಂಕಿತರು ಮೃತಪಟ್ಟಿದ್ದು, ಈವರೆಗೆ 1,316 ಜನರು ಕೋವಿಡ್ಗೆ ಸಾವನ್ನಪ್ಪಿದ್ದಾರೆ.
ಬೆಂಗಳೂರಲ್ಲಿ ಕೋವಿಡ್ ಸೋಂಕಿನಿಂದಾದ ಮರಣ ಪ್ರಮಾಣ ಶೇಕಡಾ 1.65ಕ್ಕೆ ಏರಿಕೆಯಾಗಿದೆ.