ಬೆಂಗಳೂರು:ಕೊರೊನಾದ ವಿರುದ್ಧ ಹೋರಾಡುತ್ತಿರುವ ಫ್ರಂಟ್ ಲೈನ್ ವಾರಿಯರ್ಸ್ಗೆ ಸದ್ಯಕ್ಕೆ ಕೋವಿಡ್ ತಪ್ಪದ ಕಂಟಕವಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರೇ ಕೊರೊನಾ ರೋಗಿಗಳಾದರೆ ಜನ - ಸಾಮಾನ್ಯರ ಸ್ಥಿತಿ ಏನು ಎನ್ನುವ ಆತಂಕ ಶುರುವಾಗಿದೆ.
ಸದ್ಯ, ವೈದ್ಯರೇ ಕೊರೊನಾಗೆ ತುತ್ತಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ಸಿಬ್ಬಂದಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಕೊರೊನಾ ಚಿಕಿತ್ಸೆ ನೀಡಲು ಹೋಗಿ ತಾವೇ ಸ್ವತಃ ಸೋಂಕಿನಿಂದ ಬಳಲುತ್ತಿದ್ದಾರೆ. ನಗರದ ಇಎಸ್ಐ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ, ಕಿಮ್ಸ್ ಹಾಗೂ ಕಿದ್ವಾಯಿ ಸೇರಿದಂತೆ ಹಲವು ಸರ್ಕಾರಿ - ಖಾಸಗಿ ಆಸ್ಪತ್ರೆ ವೈದ್ಯರಿಗೆ ಸಂಕಷ್ಟ ಎದುರಾಗಿದೆ. ಜಯದೇವ ಆಸ್ಪತ್ರೆಯಲ್ಲೇ ಬರೋಬ್ಬರಿ 220 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಆಸ್ಪತ್ರೆ- ವೈದ್ಯಕೀಯ ಸಿಬ್ಬಂದಿಗಳಲ್ಲಿ ಸೋಂಕಿಗೊಳಗಾದವರ ಸಂಖ್ಯೆ:
ಜಯದೇವ ಹೃದ್ರೋಗ ಆಸ್ಪತ್ರೆ - 220