ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖ ಬೆನ್ನಲ್ಲೇ RT ನಂಬರ್ ಹೆಚ್ಚಳದ ಭಯ! - ಕೊರೊನಾ ಸೋಂಕು ಇಳಿಮುಖ

ಕಳೆದ ಒಂದು ವಾರದಲ್ಲಿ 0.68 ಇದ್ದ RT ನಂಬರ್ ಈಗ 0.72 ಗೆ ಹೆಚ್ಚಳವಾಗಿದೆ. ನಾಲ್ಕು ಜನರಿಗೆ ಸೋಂಕು ತಗುಲಿದರೆ ಅವರಿಂದ ಮತ್ತೆ ಮೂವರಿಗೆ ಸೋಂಕು ಹರಡುತ್ತಿದೆ. ಹತ್ತು ರಾಜ್ಯಗಳಲ್ಲಿ RT ನಂಬರ್ ಹೆಚ್ಚಳಗವಾಗಿರುವುದು ಎಲ್ಲರಲ್ಲಿ ಆತಂಕ ಹೆಚ್ಚಿಸಿದೆ.

Corona infection decreased RT number increase
ಕೊರೊನಾ ಸೋಂಕು ಇಳಿಮುಖ ಬೆನ್ನಲ್ಲೆ RT ನಂಬರ್ ಹೆಚ್ಚಳ

By

Published : Jun 29, 2021, 11:55 AM IST

ಬೆಂಗಳೂರು : ದೇಶದಲ್ಲಿ ಕೊರೊನಾ ಅಲೆ ಕಡಿಮೆ ಆಗಿದ್ದು, ಇದರಿಂದ ಸೋಂಕಿತರ ಪ್ರಮಾಣದಲ್ಲೂ ಕೂಡಾ ಇಳಿಕೆ ಕಂಡಿದೆ. ಆದರೆ ದೇಶದ 10 ರಾಜ್ಯಗಳಲ್ಲಿ RT ನಂಬರ್ ಅಂದರೆ ರೀ ಪ್ರೊಡಕ್ಟೀವ್ ನಂಬರ್ ಹೆಚ್ಚಳವಾಗಿದೆ. ಇದು ಒಬ್ಬರಿಂದ ಸೋಂಕು ಎಷ್ಟು ಮಂದಿಗೆ ಹರಡುತ್ತಿದೆ ಎನ್ನುವುದರ ಸೂಚ್ಯಂಕವಾಗಿದೆ.

ಕಳೆದ ಒಂದು ವಾರದಲ್ಲಿ 0.68 ಇದ್ದ RT ನಂಬರ್ ಈಗ 0.72 ಗೆ ಹೆಚ್ಚಳವಾಗಿದೆ. ನಾಲ್ಕು ಜನರಿಗೆ ಸೋಂಕು ತಗುಲಿದರೆ ಅವರಿಂದ ಮತ್ತೆ ಮೂವರಿಗೆ ಸೋಂಕು ಹರಡುತ್ತಿದೆ. ಹತ್ತು ರಾಜ್ಯಗಳಲ್ಲಿ RT ನಂಬರ್ ಹೆಚ್ಚಳಗವಾಗಿರುವುದು ಎಲ್ಲರಲ್ಲಿ ಆತಂಕ ಹೆಚ್ಚಿಸಿದೆ.

ಕೇರಳ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ಒಡಿಶಾ, ಛತ್ತೀಸ್​ಗಢ, ಬಿಹಾರ, ಜಾರ್ಖಂಡ್, ಪಂಜಾಬ್, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ RT ನಂಬರ್ ಹೆಚ್ಚಳವಾಗಿದೆ‌‌.

ಈಗಾಗಲೇ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ತೆರವುಗೊಳಿಸಿದ್ದು, ಜನರ ಓಡಾಟ ಹೆಚ್ಚಳವಾಗಿರುವ ಬೆನ್ನಲ್ಲೇ ಹರಡುವಿಕೆ ಪ್ರಮಾಣ ಮತ್ತೆ ಹೆಚ್ಚುತ್ತಿದೆ. ಹೀಗಾಗಿ ಕರ್ನಾಟಕದ ಅಕ್ಕಪಕ್ಕದ ‌ಮೂರು ರಾಜ್ಯಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಳವಾಗಿರೋದರಿಂದ ನಮ್ಮ ರಾಜ್ಯದಲ್ಲೂ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ : ಭಾರತದಲ್ಲಿ 102 ದಿನಗಳ ಬಳಿಕ 40 ಸಾವಿರಕ್ಕಿಂತ ಕಡಿಮೆ ಕೊರೊನಾ ಪ್ರಕರಣ ವರದಿ

ABOUT THE AUTHOR

...view details