ಬೆಂಗಳೂರು: ಬಸವನಗುಡಿ ವಾರ್ಡ್ ಪಾಲಿಕೆ ಸದಸ್ಯ ಹಾಗೂ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ವಾರ್ಡ್ ಆಸ್ಪತ್ರೆಯಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ತ್ವರಿತವಾಗಿ ರಿಸಲ್ಟ್ ನೀಡುವ ಚಿಕಿತ್ಸಾ ಉಪಕರಣ) ಉದ್ಘಾಟಿಸುವ ವೇಳೆ ಕಟ್ಟೆ ಸತ್ಯನಾರಾಯಣ್ ಅವರ ಟೆಸ್ಟ್ ಕೂಡಾ ಮಾಡಲಾಗಿದೆ.
ಆ್ಯಂಟಿಜನ್ ಟೆಸ್ಟ್ ಕಿಟ್ ಉದ್ಘಾಟಿಸಿದ್ದ ಮಾಜಿ ಮೇಯರ್ಗೂ ಅಂಟಿದ ಕೊರೊನಾ - Antigen Test Center
ಬೆಂಗಳೂರಲ್ಲಿ ಕೊರೊನಾ ಅಬ್ಬರ ಮುಂದುವರಿದಿದೆ. ನಗರದ ಬಸವನಗುಡಿ ವಾರ್ಡ್ನಲ್ಲಿ ಆ್ಯಂಟಿಜನ್ ಟೆಸ್ಟ್ ಕಿಟ್ ಉದ್ಘಾಟಿಸಿ, ಅಲ್ಲಿಯೇ ಪರೀಕ್ಷೆಗೂ ಒಳಗಾಗಿದ್ದ ಮಾಜಿ ಮೇಯರ್ ಸತ್ಯನಾರಾಯಣ ಅವರಿಗೂ ಕೊರೊನಾ ದೃಢವಾಗಿದೆ.
![ಆ್ಯಂಟಿಜನ್ ಟೆಸ್ಟ್ ಕಿಟ್ ಉದ್ಘಾಟಿಸಿದ್ದ ಮಾಜಿ ಮೇಯರ್ಗೂ ಅಂಟಿದ ಕೊರೊನಾ Corona infected to the former mayor who inaugurated the Antigen Test Kit](https://etvbharatimages.akamaized.net/etvbharat/prod-images/768-512-8008724-650-8008724-1594642231846.jpg)
ಆ್ಯಂಟಿಜನ್ ಟೆಸ್ಟ್ ಕಿಟ್ ಉದ್ಘಾಟಿಸಿದ್ದ ಮಾಜಿ ಮೇಯರ್ಗೂ ಅಂಟಿದ ಕೊರೊನಾ
ಈ ವೇಳೆ ಪಾಸಿಟಿವ್ ಕಂಡುಬಂದಿದ್ದು, ಇದೀಗ ವೈದ್ಯರ ಸೂಚನೆಯಂತೆ ಚಿಕಿತ್ಸೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಬಸವನಗುಡಿ ಪ್ರದೇಶದಲ್ಲಿ ಹೆಚ್ಚಾಗಿ ಹೊರಗಡೆ ಓಡಾಟ ನಡೆಸಿದ್ದರಿಂದ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.