ಕರ್ನಾಟಕ

karnataka

ETV Bharat / state

ಸೋಂಕಿತ ಪತಿಯ ಪತ್ರ ಸೃಷ್ಟಿಸಿದ ಆತಂಕ: ಠಾಣೆ ಮೆಟ್ಟಿಲೇರಿದ ಪತ್ನಿ - ಬೆಂಗಳೂರು ಇತ್ತೀಚಿನ ಸುದ್ದಿ

ಕೊರೊನಾ ಸೋಂಕಿತ ವ್ಯಕ್ತಿ ಚಿತ್ತೂರಿಗೆ ಓಡಿಹೋಗಿದ್ದು, "ನನಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಾನು ಬದುಕುವುದು ಅನುಮಾನ ಅನ್ನಿಸುತ್ತಿದೆ. ಮಕ್ಕಳನ್ನು‌ ಸರಿಯಾಗಿ ನೋಡಿಕೋ" ಎಂದು ಪತ್ನಿಗೆ ಪತ್ರ ಬರೆದಿದ್ದಾನೆ. ಇದನ್ನು ಕಂಡ ಪತ್ನಿ ಭಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.

ಬೆಂಗಳೂರು ಕೊರೊನಾ
ಬೆಂಗಳೂರು ಕೊರೊನಾ

By

Published : Oct 8, 2020, 10:57 AM IST

ಬೆಂಗಳೂರು:ಕೊರೊನಾ ಸೋಂಕು ದಿನೇದಿನೆ‌ ಹೆಚ್ಚಾಗುತ್ತಿದ್ದು, ಅನೇಕ ಕುಟುಂಬಗಳು ಈ ಮಹಾಮಾರಿಯಿಂದ ತತ್ತರಿಸಿ ಹೋಗಿವೆ. ಈ ನಡುವೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸವಾಗಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಆತ ಚಿತ್ತೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ತನ್ನ ಹೆಂಡತಿಗೆ ಪತ್ರ ಬರೆದಿದ್ದಾನೆ.

"ನನಗೆ ಕೊರೊನಾ ಸೋಂಕು ದೃಡಪಟ್ಟಿದೆ. ನಾನು ಬದುಕುವುದು ಅನುಮಾನ. ಮಕ್ಕಳನ್ನು‌ ಸರಿಯಾಗಿ ನೋಡಿಕೋ" ಎಂದು ಪತ್ನಿಗೆ ತಮಿಳಿನಲ್ಲಿ ಲೆಟರ್ ಬರೆದಿದ್ದಾನೆ. ಇದೀಗ ಈತ ಚಿತ್ತೂರಿಗೆ ಪ್ರಯಾಣ ಬೆಳೆಸಿರುವುದು ಕುಟುಂಬ ಹಾಗೂ ಅಧಿಕಾರಿಗಳಿಗೆ ದೊಡ್ಡ ತಲೆನೋವುವಾಗಿ ಪರಿಣಮಿಸಿದೆ.

ಇನ್ನು ಘಟನೆ ಸಂಬಂಧ ಪತ್ನಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಸದ್ಯ ಇಲ್ಲಿನ ಪೊಲೀಸರು ಆಂಧ್ರ ಪೊಲೀಸರಿಗೆ ಮಾಹಿತಿ ರವಾನೆ ಮಾಡಿದ್ದಾರೆ.

ABOUT THE AUTHOR

...view details