ಕರ್ನಾಟಕ

karnataka

ETV Bharat / state

ಬಿಬಿಎಂಪಿಗೆ ತಲೆನೋವಾದ ಕೊರೊನಾ ಸೋಂಕಿತ ಅಜ್ಜಿ: ಕಗ್ಗಂಟಾದ ಟ್ರಾವೆಲ್​ ಹಿಸ್ಟರಿ

ಕೋಡಿಚಿಕ್ಕನ ಹಳ್ಳಿಯ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದು, ಪ್ರಯಾಣದ ಇತಿಹಾಸ ಸ್ಪಷ್ಟವಾಗಿ ಇಲ್ಲದೆ ಇರುವುದು ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿದೆ. ಕೋಡಿಚಿಕ್ಕನ ಹಳ್ಳಿಯನ್ನು ಕಂಟೈನ್ಮೆಂಟ್ ವಲಯ ಗುರುತಿಸಿದೆ. ಏಪ್ರಿಲ್​ 26ರಂದು 3 ಆಸ್ಪತ್ರೆಗಳಲ್ಲಿ ಸೋಂಕಿತ ವೃದ್ಧೆ ತಿರುಗಾಡಿದ್ದಾರೆ ಎಂದು ತಿಳಿದುಬಂದಿದೆ.

Corona infected old women caused headache in Bangalore
ಬಿಬಿಎಂಪಿಗೆ ತಲೆನೋವಾದ ಕೊರೊನಾ ಸೋಂಕಿತ ಅಜ್ಜಿ: ಮೂರು ಆಸ್ಪತ್ರೆಗಳಿಗೆ ಬೀಳುತ್ತಾ ಬೀಗ..?

By

Published : May 1, 2020, 11:28 PM IST

ಬೆಂಗಳೂರು:ಕೊರೊನಾ ಎಷ್ಟು ತಲೆನೋವು ತಂದಿದೆಯೋ ಇದರಂತೆ ಕೆಲವು ಸೋಂಕಿತರ ಟ್ರಾವೆಲ್​ ಹಿಸ್ಟರಿ ಅಧಿಕಾರಿಗಳಿಗೆ ಮತ್ತೊಂದು ರೀತಿಯ ತಲೆನೋವಾಗಿದೆ. ರೋಗಿ ಸಂಖ್ಯೆ- 565ರ 64 ವರ್ಷದ ಅಜ್ಜಿಗೆ ಕೊರೊನಾ ಹೇಗೆ ಬಂತು ಎಂಬುದು ಪ್ರಶ್ನೆಯಾಗಿ ಉಳಿದಿದೆ.

ವೃದ್ಧೆಗೆ ಯಾರ ಪ್ರಾಥಮಿಕ ಸಂಪರ್ಕದಿಂದ ಪಾಸಿಟಿವ್ ಆಗಿಲ್ಲ. ಅಲ್ಲದೇ ಯಾವುದೇ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲ. ಹೀಗಾಗಿ, ಸೋಂಕಿನ ಮೂಲ ಪತ್ತೆ ಮಾಡಲು ಬಿಬಿಎಂಪಿಗೆ ಕಠಿಣ ಸವಾಲು ಎದುರಾಗಿದೆ.

ಈಗಾಗಲೇ ಮೂಲ ಪತ್ತೆ ಆರಂಭಿಸಿದ ಅಧಿಕಾರಿಗಳು, ಕೋಡಿಚಿಕ್ಕನಹಳ್ಳಿಗೆ ತೆರಳಿ 7 ಮಂದಿ ಪ್ರಾಥಮಿಕ ಹಾಗೂ 10 ಜನ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಿದ್ದಾರೆ. ಕೋಡಿಚಿಕ್ಕನಹಳ್ಳಿ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಏಪ್ರಿಲ್​ 26ರಂದು ಮೂರು ಆಸ್ಪತ್ರೆಗಳಲ್ಲಿ ಸೋಂಕಿತ ವೃದ್ಧೆ ತಿರುಗಾಡಿದ್ದಾರೆ.

ಮೊದಲಿಗೆ ಬಿಳೇಕಳ್ಳಿಯ ಮ್ಯಾರಿಗೋಲ್ಡ್ ಆಸ್ಪತ್ರೆ, ಅಪೊಲೋ ಆಸ್ಪತ್ರೆ ಹಾಗೂ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಲ್ಯಾಬ್​ ಟೆಸ್ಟ್​ ಮಾಡಿದಾಗ ನಿನ್ನೆ ಪಾಸಿಟಿವ್​ ರಿಪೋರ್ಟ್ ಬಂದಿತ್ತು. ವಿಷಯ ಮುಚ್ಚಿಟ್ಟ ಮ್ಯಾರಿಗೋಲ್ಡ್ ಆಸ್ಪತ್ರೆಗೆ ನೋಟಿಸ್​ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಮಣಿಪಾಲ್ ಹಾಗೂ ಅಪೋಲದಲ್ಲಿ ಪಿಪಿಇ ಕಿಟ್ ಹಾಕಿಕೊಂಡು ಚಿಕಿತ್ಸೆ ನೀಡಿದ್ದು, ಯಾರನ್ನೂ ಕ್ವಾರೆಂಟೈನ್ ಮಾಡುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆ ಮುಚ್ಚುವುದು ಅನುಮಾನ. ವೃದ್ಧೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈ ಹಿನ್ನಲೆಯಲ್ಲಿ ವೈರಸ್​, ಸಮುದಾಯಕ್ಕೆ ಹರಡಿರುವ ಆತಂಕ ಶುರುವಾಗಿದೆ.

ABOUT THE AUTHOR

...view details