ಕರ್ನಾಟಕ

karnataka

ETV Bharat / state

ಬಿಬಿಎಂಪಿ ಮಾಸಿಕ ಸಭೆಗೆ ಕೊರೊನಾ ಸೋಂಕಿತ ಕಾರ್ಪೊರೇಟರ್​​​ ಗೈರು : ಪಾಲಿಕೆ ಸದಸ್ಯರು ನಿಟ್ಟುಸಿರು - ಪಾದರಾಯಣಪುರ ಕೊರೊನಾ ಸೋಂಕಿತ ಕಾರ್ಪೊರೇಟರ್​

ನಿನ್ನೆ ನಡೆದ ಬಿಬಿಎಂಪಿ ಕಾರ್ಪೊರೇಟರ್​ಗಳ​​ ಸಭೆಗೆ ಅದೃಷ್ಟವಶಾತ್​​ ಪಾದರಾಯನಪುರ ಕೊರೊನಾ ಸೋಂಕಿತ ಕಾರ್ಪೊರೇಟರ್​ ಭಾಗಿಯಾಗಿಲ್ಲ.

Corona infected corporator absent for BBMP monthly meeting
ಬಿಬಿಎಂಪಿ ಮಾಸಿಕ ಸಭೆಗೆ ಕೊರೊನಾ ಸೋಂಕಿತ ಕಾರ್ಪೊರೇಟರ್​​​ ಗೈರು

By

Published : May 29, 2020, 11:24 PM IST

ಬೆಂಗಳೂರು : ನಿನ್ನೆ ನಡೆದ ಬಿಬಿಎಂಪಿ ಮಾಸಿಕ ಸಭೆಗೆ ಪಾದರಾಯನಪುರ ಕೊರೊನಾ ಸೋಂಕಿತ ಕಾರ್ಪೊರೇಟರ್​​ ಹಾಜರಾಗದೇ ಇರುವುದು ಜನಪ್ರತಿನಿಧಿಗಳು ನಿಟ್ಟುಸಿರು ಬಿಡಲು ಕಾರಣವಾಗಿದೆ.

ಸಭೆಯಲ್ಲಿ 198 ಕಾರ್ಪೊರೇಟರ್​​ಗಳ ಪೈಕಿ 150 ಕ್ಕೂ ಹೆಚ್ಚು ಪಾಲಿಕೆ ಸದಸ್ಯರು ಹಾಜರಿದ್ದರು. ಅದೃಷ್ಟವಶಾತ್ ಪಾದರಾಯನಪುರ ಪಾಲಿಕೆ ಸದಸ್ಯ ಗೈರಾಗಿದ್ದರು. ಹೀಗಾಗಿ ಜನಪ್ರತಿನಿಧಿಗಳು ನಿಟ್ಟುಸಿರು ಬಿಡುವಂತಾಗಿದೆ.

ನಿನ್ನೆ ಕೌನ್ಸಿಲ್ ಸಭೆ ಪೂರ್ತಿ ಬಿಜೆಪಿ ವಿರುದ್ಧ ಪ್ರತಿಭಟನೆ, ಗದ್ದಲಕ್ಕೆ ಸಾಕ್ಷಿಯಾಗಿತ್ತು. 150 ಕ್ಕೂ ಹೆಚ್ಚು ಪಾಲಿಕೆ ಸದಸ್ಯರು, 50 ಕ್ಕೂ ಹೆಚ್ಚು ಅಧಿಕಾರಿಗಳು ಪಾಲಿಕೆ ಸಭೆಯಲ್ಲಿ ಭಾಗಿಯಾಗಿದ್ದು, ಯಾವುದೇ ಕೊರೊನಾ ಮುಂಜಾಗ್ರತೆ ಕ್ರಮಗಳ್ನು ಪಾಲಿಸಿರಲಿಲ್ಲ. ಒಂದು ವೇಳೆ ಕೊರೊನಾ ಸೋಂಕಿತ ಸದಸ್ಯ ಈ ಸಭೆಯಲ್ಲಿ ಭಾಗಿಯಾಗಿದ್ದರೆ ಹಲವರಿಗೆ ಸೋಂಕು ತಗುಲುವ ಸಾಧ್ಯತೆಯಿತ್ತು.

ABOUT THE AUTHOR

...view details