ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತ ಪೌರಕಾರ್ಮಿಕ ಸಾವು... ಬಿಬಿಎಂಪಿ ವಿರುದ್ಧ ಪ್ರತಿಭಟನೆ - Bangalore Corona case

ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಒಂದೆಡೆ ಆರ್ಭಟ ಮುಂದುವರಿದಿದ್ದರೆ, ಇತ್ತ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನಪ್ಪುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಪೌರಕಾರ್ಮಿಕನೋರ್ವ ವೃತಪಟ್ಟ ಪ್ರಕರಣ ವರದಿಯಾಗಿತ್ತು. ಇದೀಗ ಪೌರ ಕಾರ್ಮಿಕರು ಹಾಗೂ ಮಾದಿಗ ದಂಡೋರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.

Corona-infected civilian worker died.. Protest against BBMP in Bangalore
ಕೊರೊನಾ ಸೋಂಕಿತ ಪೌರಕಾರ್ಮಿಕ ಸಾವು...ಬಿಬಿಎಂಪಿ ವಿರುದ್ಧ ಪ್ರತಿಭಟನೆ

By

Published : Jul 27, 2020, 5:07 PM IST

Updated : Jul 27, 2020, 5:18 PM IST

ಬೆಂಗಳೂರು: ನಗರದಲ್ಲಿ ತುರ್ತು ಸಂದರ್ಭದಲ್ಲಿಯೂ ಕೊರೊನಾ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಶುಕ್ರವಾರ ತಡರಾತ್ರಿ ಇದೇ ಕಾರಣದಿಂದ ರಘು ವೇಲು ಎಂಬ ಪೌರಕಾರ್ಮಿಕ ಮೃತಪಟ್ಟಿದ್ದಾರೆ. ಹೀಗಾಗಿ ಪೌರಕಾರ್ಮಿಕರಿಗೆ ರಕ್ಷಣೆ ಕೊಡಿ, ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಿ ಎಂದು ಪುಲಕೇಶಿನಗರ ಉಪವಿಭಾಗದಲ್ಲಿ ಪೌರಕಾರ್ಮಿಕರು, ಮಾದಿಗ ದಂಡೋರ ಸಂಘಟನೆಯಿಂದ ಪ್ರತಿಭಟನೆ ನಡೆಸಿದ್ದಾರೆ.

ಕೊರೊನಾ ಸೋಂಕಿತ ಪೌರಕಾರ್ಮಿಕ ಸಾವು... ಬಿಬಿಎಂಪಿ ವಿರುದ್ಧ ಪ್ರತಿಭಟನೆ

ಶುಕ್ರವಾರ ಸಂಜೆಯಿಂದ ರಘು ವೇಲು ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಆಸ್ಪತ್ರೆಗಳು ದಾಖಲಿಸಿಕೊಂಡಿಲ್ಲ. ಬಳಿಕ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್​​ ಸಿಕ್ಕಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಬಿಬಿಎಂಪಿ ಹಾಗೂ ಸರ್ಕಾರ ಇನ್ನು ಮುಂದೆಯಾದರೂ ಪೌರಕಾರ್ಮಿಕರಿಗೆ ಆಸ್ಪತ್ರೆ ಸೌಲಭ್ಯ ಕಲ್ಪಿಸಲಿ ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

Last Updated : Jul 27, 2020, 5:18 PM IST

ABOUT THE AUTHOR

...view details