ಕರ್ನಾಟಕ

karnataka

By

Published : Jul 13, 2020, 4:31 PM IST

ETV Bharat / state

ಕಮಿಷನರ್ ಕಚೇರಿಯ ಮಹಿಳಾ ಹೋಮ್​ ಗಾರ್ಡ್​ಗೆ ಕೊರೊನಾ

ಕಚೇರಿಯಲ್ಲಿ ನಗರ ಆಯುಕ್ತ ಭಾಸ್ಕರ್ ರಾವ್ ಸೇರಿ ಪೂರ್ವ, ಪಶ್ಚಿಮ ಹೆಚ್ಚುವರಿ ಆಯುಕ್ತರು, ಸಿಸಿಬಿ ಆಯುಕ್ತ ಹಾಗೂ ಡಿಸಿಪಿಗಳು ಕಾರ್ಯ ನಿರ್ವಹಹಿಸುತ್ತಿದ್ದಾರೆ..

Corona found in home guard women in Bangalore
ಮಹಿಳಾ ಹೋಮ್​ ಗಾರ್ಡ್​ಗೆ ಕೊರೊನಾ ಧೃಢ

ಬೆಂಗಳೂರು :ನಗರ ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಹೋಮ್​ ಗಾರ್ಡ್​ಗೆ ಕೊರೊನಾ ಸೋಂಕು ತಗುಲಿದೆ.

ನಗರ ಪೊಲೀಸ್​ ಆಯುಕ್ತರ ಕಚೇರಿಯ ಪ್ರವೇಶ ದ್ವಾರದಲ್ಲಿ ಹೋಮ್​ ಗಾರ್ಡ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ 35 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿದ್ದರಿಂದ ಇವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತೆಯ ಸಂಪರ್ಕದಲ್ಲಿದ್ದ ಹಾಗೂ ಆಕೆಯ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಕಮಿಷನರ್ ಕಚೇರಿಯಲ್ಲಿ 13 ಕೊರೊನಾ ಕೇಸ್​ ಪತ್ತೆಯಾದಂತಾಗಿದೆ.

ಕಚೇರಿಯಲ್ಲಿ ನಗರ ಆಯುಕ್ತ ಭಾಸ್ಕರ್ ರಾವ್ ಸೇರಿ ಪೂರ್ವ, ಪಶ್ಚಿಮ ಹೆಚ್ಚುವರಿ ಆಯುಕ್ತರು, ಸಿಸಿಬಿ ಆಯುಕ್ತ ಹಾಗೂ ಡಿಸಿಪಿಗಳು ಕಾರ್ಯ ನಿರ್ವಹಹಿಸುತ್ತಿದ್ದಾರೆ. ಕಚೇರಿಯಲ್ಲಿ ನಮ್ಮ100 ಹಾಗೂ ಕಮಾಂಡ್ ಸೆಂಟರ್ ಬಿಟ್ಟು ಇತರೆ ಕಚೇರಿಯನ್ನ ಸೀಲ್​ಡೌನ್ ಮಾಡಲಾಗಿದೆ.‌ ಹೊರಗಿನಿಂದ ಸಾರ್ವಜನಿಕರು ಹಾಗೂ ಇತರೆ ಠಾಣಾ ಸಿಬ್ಬಂದಿ ಬಾರದಂತೆ ಕಡಿವಾಣ ಹಾಕಲಾಗಿದೆ.

ABOUT THE AUTHOR

...view details