ಬೆಂಗಳೂರು: ನಗರದ ಡಿ.ಜೆ.ಹಳ್ಳಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಫೈರಿಂಗ್ನಲ್ಲಿ ಮೃತ ಪಟ್ಟ ಮೂವರ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.
ಬೆಂಗಳೂರು ಗಲಭೆ: ಪೊಲೀಸ್ ಫೈರಿಂಗ್ನಲ್ಲಿ ಮೃತರಾದ ಇಬ್ಬರಿಗೆ ಕೊರೊನಾ - Corona for two dead in police firing
ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮೂವರ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ದೃಢವಾಗಿದೆ.
ಪೊಲೀಸ್ ಫೈರಿಂಗ್ನಲ್ಲಿ ಮೃತರಾದ ಇಬ್ಬರಿಗೆ ಕೊರೊನಾ
ಮೂವರ ಮೃತದೇಹ ಬೌರಿಂಗ್ ಆಸ್ಪತ್ರೆಯಲ್ಲಿದ್ದು, ಇಂದು ಬೌರಿಂಗ್ ವೈದ್ಯರ ನೇತೃತ್ವದಲ್ಲಿ RT-PCR ಟೆಸ್ಟ್ ಮಾಡಿದಾಗ ಮೂವರ ಪೈಕಿ ಇಬ್ಬರಿಗೂ ಕೊರೊನಾ ಪಾಸಿಟಿವ್ ದೃಢವಾಗಿದೆ.
ಸಾವನ್ನಪ್ಪಿದವರ ಕುಟುಂಬಸ್ಥರು ಇಂದು ಠಾಣೆಗೆ ಭೇಟಿ ನೀಡಿದ್ದರು. ಕುಟುಂಬಸ್ಥರ ಸಂಪರ್ಕದಲ್ಲಿ ಪೊಲೀಸರು, ಮಾಧ್ಯಮದವರು ಹಾಗೂ ಸ್ಥಳೀಯರು ಇದ್ದು ಸದ್ಯ ಗಲಭೆ ನಡುವೆ ಕೊರೊನಾ ಆತಂಕ ಉಂಟಾಗಿದೆ.