ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದ ಪೇದೆಯೊಬ್ಬನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ, ಪೇದೆ ಕಾರ್ಯ ನಿರ್ವಹಿಸುತ್ತಿದ್ದ ಠಾಣೆ, ಪೊಲೀಸ್ ಠಾಣಾ ಜೀಪ್, ಆತ ಕಾರ್ಯ ನಿರ್ವಹಿಸ್ತಿದ್ದ ಸ್ಥಳ ಹಾಗೂ ಪೇದೆ ಇದ್ದ ಕ್ವಾಟರ್ಸ್ ಅನ್ನು ಫುಲ್ ಸ್ಯಾನಿಟೈಸ್ ಮಾಡಲಾಗ್ತಿದೆ.
ಪೇದೆಗೆ ಕೊರೊನಾ: ಠಾಣೆ ಸೇರಿದಂತೆ ಪೇದೆ ವಾಸಸ್ಥಳದಲ್ಲಿ ಸ್ಯಾನಿಟೈಸ್
ಪೇದೆಯೊಬ್ಬನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ, ಪೇದೆ ಕಾರ್ಯ ನಿರ್ವಹಿಸುತ್ತಿದ್ದ ಠಾಣೆ, ಪೊಲೀಸ್ ಠಾಣಾ ಜೀಪ್, ಆತ ಕಾರ್ಯ ನಿರ್ವಹಿಸ್ತಿದ್ದ ಸ್ಥಳ ಹಾಗೂ ಪೇದೆ ಇದ್ದ ಕ್ವಾಟರ್ಸ್ ಫುಲ್ ಸ್ಯಾನಿಟೈಸ್ ಮಾಡಲಾಗ್ತಿದೆ.
ಪೇದೆ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲು ಆರೋಗ್ಯಾಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ಪೇದೆ ಎಲ್ಲಿ ಭದ್ರತೆಗೆ ನಿಯೋಜನೆಗೊಂಡಾಗ ಸೋಂಕು ತಗುಲಿದೆ ಅನ್ನೋದ್ರ ತನಿಖೆ ಮುಂದುವರೆದಿದೆ. ಸದ್ಯ ವಿಚಾರ ತಿಳಿದು ಟ್ರಾಫಿಕ್ ಪೂರ್ವ ವಿಭಾಗ ಡಿಸಿಪಿ ನಾರಾಯಣ್ ಅವರು ಠಾಣೆಯ ಎಲ್ಲ ಸಿಬ್ಬಂದಿ ಜಾಗೃತರಾಗಿರುವಂತೆ ಸೂಚನೆ ನೀಡಿದ್ದಾರೆ.
ಇನ್ನು ಡಿಸಿಪಿ ಮಾಧ್ಯಮದವರಿಗೆ ಮಾಹಿತಿ ನೀಡಿ, ಪೇದೆ ಯಲಹಂಕದ ಬಳಿ ಕ್ವಾಟರ್ಸ್ನಲ್ಲಿದ್ದು, ಮೇ. 20ರಂದು ಸಿ.ವಿ ರಾಮನ್ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ನಿನ್ನೆ ಸೋಂಕಿನ ವರದಿ ಬಂದಿದೆ. ಪೇದೆ ಕುಟುಂಬಸ್ಥರನ್ನ ಊರಿಗೆ ಕಳುಹಿಸಿದ್ದು, ಪೇದೆ ಒಬ್ಬನೇ ವಾಸ ಮಾಡುತ್ತಿದ್ದರು. ಪೇದೆ ವಾಸ ಮಾಡ್ತಿದ್ದ ಪ್ರದೇಶದಲ್ಲಿ ಸದ್ಯ ಭಯದ ವಾತಾವಾರಣ ನಿರ್ಮಾಣವಾಗಿದೆ. ಠಾಣೆ ಮತ್ತು ವಾಸದ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.