ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 4 ತಿಂಗಳ ಮಗು ಸೇರಿ ನಾಲ್ವರಿಗೆ ಕೊರೊನಾ: ಓರ್ವ ಸಾವು - ನಾಲ್ವರಿಗೆ ಕೋವಿಡ್-19 ಪಾಸಿಟಿವ್

ಕಳೆದ ಮೂರು ದಿನದ ಹಿಂದೆ ಕೋವಿಡ್ ಪಾಸಿಟಿವ್ ಬಂದಿದ್ದ 32 ವರ್ಷದ P-1270 ನಾಗಾವರ ಕೆ.ಜಿ ಹಳ್ಳಿಯ ವ್ಯಕ್ತಿ ದೀರ್ಘಕಾಲದ ಕ್ಷಯ ಹಾಗೂ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕೊರೊನಾ
ಕೊರೊನಾ

By

Published : May 23, 2020, 2:26 PM IST

ಬೆಂಗಳೂರು:ನವದೆಹಲಿಯಿಂದ ರಾಜ್ಯಕ್ಕೆ ಮರಳಿ ಕ್ವಾರಂಟೈನ್​ನಲ್ಲಿದ್ದ ನಾಲ್ಕು ತಿಂಗಳ ಮಗು ಸೇರಿದಂತೆ ಇತರೆ ನಾಲ್ವರಿಗೆ ಕೋವಿಡ್-19 ಪಾಸಿಟಿವ್ ವರದಿಯಾಗಿದೆ.

P-1793 ಮಗುವನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಈ ಪ್ರಕರಣ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ. P-1815 (34) ವರ್ಷದ ಪೊಲೀಸ್​​ ಪೇದೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನು ತಮಿಳುನಾಡಿನಿಂದ ರಾಜ್ಯಕ್ಕೆ ಮರಳಿದ್ದ P-1930 (57) ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಉಳಿದಂತೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದಿದ್ದ P-1939 (17) ವರ್ಷದ ಯುವಕ ಕೋವಿಡ್ ಪಾಸಿಟಿವ್ ಬಂದಿದೆ. ಮೂವರು ಅಂತರ್ ರಾಜ್ಯ ಪ್ರಯಾಣದ ಇತಿಹಾಸ ಇರುವವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕೊರೊನಾ ವಾರಿಯರ್ ಪೊಲೀಸ್ ಪೇದೆಗೂ ಕೊರೊನಾ ದೃಢಪಟ್ಟಿದೆ.

ಕಳೆದ ಮೂರು ದಿನದ ಹಿಂದೆ ಕೋವಿಡ್ ಪಾಸಿಟಿವ್ ಬಂದಿದ್ದ 32 ವರ್ಷದ P-1270 ನಾಗಾವರ ಕೆ.ಜಿ ಹಳ್ಳಿಯ ವ್ಯಕ್ತಿ ದೀರ್ಘಕಾಲದ ಕ್ಷಯ ಹಾಗೂ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಶನಿವಾರ ಮಧ್ಯಾಹ್ನದ ವರೆಗಿನ ಕೋವಿಡ್ ಪಾಸಿಟಿವ್ ವಿವರ:

P-1793 (4) ತಿಂಗಳ ಗಂಡು ಮಗು ನವದೆಹಲಿಯಿಂದ ಪ್ರಯಾಣ, P-1815 (34) ವರ್ಷದ ಗಂಡು, P-1930 (57) ವರ್ಷದ ಗಂಡು ತಮಿಳುನಾಡಿಂದ ಪ್ರಯಾಣ, P-1939 (17) ವರ್ಷದ ಗಂಡು ಮಹಾರಾಷ್ಟ್ರದಿಂದ ಪ್ರಯಾಣ

ABOUT THE AUTHOR

...view details