ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 784 ಮಂದಿಗೆ ಕೋವಿಡ್ ಸೋಂಕು: ಮತ್ತೆ 6 ಮಂದಿ ಬಲಿ - Corona

ಯುಕೆಯಿಂದ ಬಂದವರಲ್ಲಿ 10 ಮಂದಿಗೆ ರೂಪಾಂತರಿ ಕೊರೊನಾ ದೃಢಪಟ್ಟಿದೆ.

dsd
ರಾಜ್ಯದಲ್ಲಿಂದು 784 ಮಂದಿಗೆ ಕೋವಿಡ್

By

Published : Jan 6, 2021, 9:00 PM IST

‌ಬೆಂಗಳೂರು: ರಾಜ್ಯದಲ್ಲಿಂದು ಮತ್ತೆ 784 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9,24,137 ಕ್ಕೆ ಏರಿಕೆ ಆಗಿದೆ.

6 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 12,124 ತಲುಪಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತಪಟ್ಟಿದ್ದಾರೆ. 1,238 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 9,02,817 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.‌ ತೀವ್ರ ನಿಗಾ ಘಟಕದಲ್ಲಿ 210 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ 9,177 ಸಕ್ರಿಯ ಪ್ರಕರಣಗಳು ಬಾಕಿ ಇವೆ.

ಕಳೆದ 7 ದಿನಗಳಲ್ಲಿ 22,188 ಮಂದಿ ಹೋಂ ಕ್ವಾರಂಟೈನ್ ಆಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 60,515, ದ್ವಿತೀಯ ಸಂಪರ್ಕದಲ್ಲಿ 68,458 ಜನ ಇದ್ದಾರೆ.‌

1,124 ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಇದರಲ್ಲಿ 40 ಮಂದಿಗೆ ಸೋಂಕು ತಗುಲಿದ್ದು, ಇವರ ಸಂಪರ್ಕದಲ್ಲಿದ್ದ 25 ಮಂದಿಗೂ ಕೊರೊನಾ ದೃಢವಾಗಿದೆ.

ABOUT THE AUTHOR

...view details