ಬೆಂಗಳೂರು: ವೈಯಾಲಿಕಾವಲ್ನ ಒಂದೇ ಮನೆಯ 7 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಜಯನಗರದ ಕೊರಿಯರ್ ಆಫೀಸ್ನಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು. ಅವರ ಪ್ರೈಮರಿ ಕಾಂಟ್ಯಾಕ್ಟ್ ಆಗಿದ್ದ ವೈಯಾಲಿಕಾವಲ್ನ ಮಹಿಳೆಯಿಂದ ಮನೆ ಮಂದಿಗೆಲ್ಲಾ ಸೋಂಕು ತಗುಲಿದೆ.
ಬೆಂಗಳೂರು: ವೈಯಾಲಿಕಾವಲ್ನ ಒಂದೇ ಮನೆಯ 7 ಮಂದಿಗೆ ಕೊರೊನಾ - ಬೆಂಗಳೂರಿನಲ್ಲಿ ಕೊರೊನಾ ಸುದ್ದಿ
ಬೆಂಗಳೂರಿನ ವೈಯಾಲಿಕಾವಲ್ನ ಒಂದೇ ಮನೆಯ 7 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.
ವೈಯಾಲಿಕಾವಲ್ನ ಒಂದೇ ಮನೆಯ 7 ಮಂದಿಗೆ ಕೊರೊನಾ
ಏಳು ಮಂದಿಯಲ್ಲಿ ನಾಲ್ವರು ರಾಜಾಜಿನಗರದ ಇಎಸ್ಐ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದ ಮೂರು ಮಂದಿಯನ್ನು ಮನೆಯಲ್ಲೇ ಐಸೋಲೇಷನ್ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಕೊರೊನಾ ಸೋಂಕಿತರ ಮನೆ ಇದ್ದು, ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ.
ಮನೆ ಮನೆಗೆ ತೆರಳಿ ಬಿಬಿಎಂಪಿ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡುತ್ತಿದ್ದು, 100 ಮೀಟರ್ ವ್ಯಾಪ್ತಿಯಲ್ಲಿ ಹೆಲ್ತ್ ಸರ್ವೇ ಮಾಡಲಾಗುತ್ತಿದೆ.