ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರ, ಕೋಲ್ಕತ್ತಾದಿಂದ ಬಂದಿರೋದಾಗಿ ಜನರಲ್ಲಿ ಭಯ ಹುಟ್ಟಿಸಿದ ಅಪರಿಚಿತ! - ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತಾನು ಮಹಾರಾಷ್ಟ್ರ, ಕೋಲ್ಕತ್ತಾದಿಂದ ಬಂದಿದ್ದು ಎಂದು ಹೇಳುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದು ವಿಚಾರಿಸಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ಹೇಳಿ ಹೋಗಿದ್ದಾರೆ.

Corona fears in bangalore
ಬೆಂಗಳೂರಿನಲ್ಲಿ ಕೊರೊನಾ ಭಯು ಹುಟ್ಟಿಸಿದ ಅಪರಿಚಿತ

By

Published : May 19, 2020, 12:43 PM IST

ಬೆಂಗಳೂರು: ನಗರದ ಭೂಮಿಕಾ ಲೇಔಟ್​​​​​​ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೊರೊನಾ ಭಯ ಹುಟ್ಟಿಸಿದ್ದು, ಅಲ್ಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದಾನೆ. ಇಂದು ಭೂಮಿಕಾ ಲೇಔಟ್​​​​​​​​​​​​​​​ನಲ್ಲಿ ಪ್ರತ್ಯಕ್ಷವಾಗಿರುವ ಆ ವ್ಯಕ್ತಿ ಅಲ್ಲಿಯೇ ಉಳಿದುಕೊಂಡಿದ್ದಾನೆ. ಮಹಾರಾಷ್ಟ್ರದಿಂದ ಬಂದಿದ್ದು, ಕೋಲ್ಕತ್ತಾದಿಂದ ಬಂದಿದ್ದು ಎಂದು ಹೇಳುತ್ತಾ ಜನರಲ್ಲಿ ಭಯ ಹುಟ್ಟಿಸಿದ್ದು, ಅಲ್ಲಿನ ಜನರು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಭಯ ಹುಟ್ಟಿಸಿದ ಅಪರಿಚಿತ

ಇನ್ನು ಸ್ಥಳಕ್ಕೆ ಪೊಲೀಸರು ಬಂದು ವಿಚಾರಿಸಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ಹೇಳಿ ಹೋಗಿದ್ದಾರೆ. ಅದರೆ ಆ ವ್ಯಕ್ತಿಯು ನನ್ನ ಇಬ್ಬರು ಸ್ನೇಹಿತರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ನನಗೂ ಇವತ್ತು ಟೆಸ್ಟ್ ಮಾಡಿದ್ದಾರೆ. ಅದಕ್ಕೆ ನಾನು ಇಲ್ಲಿಗೆ ಓಡಿ ಬಂದುಬಿಟ್ಟೆ ಎಂದು ಹೇಳುತ್ತಿದ್ದಾನೆ. ಇದರಿಂದಾಗಿ ಅಲ್ಲಿನ ಜನರು ಭಯಭೀತರಾಗಿದ್ದು, ಈ ಕುರಿತು ಅಧಿಕಾಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ABOUT THE AUTHOR

...view details