ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 12 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. 25 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಈವರೆಗೂ ಕೊರೊನಾ ಮುಕ್ತವಾಗಿದ್ದ ಸಕ್ಕರೆನಾಡಲ್ಲಿ ಮೂವರಿಗೆ ಸೋಂಕು ಕಾಣಿಸಿಕೊಂಡಿರೋದು ಆತಂಕ ಮೂಡಿಸಿದೆ.
ಸೋಂಕಿತರನ್ನು ಸಂಖ್ಯೆ 164 ರಿಂದ 175 ರವರೆಗೆ ಗುರ್ತಿಸಲಾಗಿದ್ದು ಅವರ ವಿವರ ಹೀಗಿದೆ:
*ರೋಗಿ-164:33 ವರ್ಷದ ಬಾಗಲಕೋಟೆಯ ಮುಧೋಳ ನಿವಾಸಿಯಾಗಿದ್ದು, ಮಾರ್ಚ್ 13-18ರವರೆಗೆ ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಸದ್ಯ ಈತನಿಗೆ ಬಾಗಲಕೋಟೆಯ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ -165: 41 ವರ್ಷದ ಮಹಿಳೆ ಹಾಗೂ ಬಾಗಲಕೋಟೆ ನಿವಾಸಿಯಾಗಿದ್ದು, ರೋಗಿ 125ರ ನೆರೆಹೊರೆಯವರಾಗಿದ್ದಾರೆ. ಬಾಗಲಕೋಟೆಯ ಆಸ್ಪತ್ರೆಯಲ್ಲಿ ಸೋಂಕಿತೆಗೆ ಚಿಕಿತ್ಸೆ ಮುಂದುವರಿದಿದೆ.
*ರೋಗಿ-166: ಗದಗ ಮೂಲದ 80 ವರ್ಷದ ವೃದ್ಧೆಯಾಗಿದ್ದಾರೆ. ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದು ಗದಗ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-167: 29 ವರ್ಷದ ಬೆಂಗಳೂರು ನಿವಾಸಿವಾಗಿದ್ದು ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಭಾಗಿಯಾಗಿದ್ದ. ಸದ್ಯ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-168: ಬೆಂಗಳೂರಿನ 50 ವರ್ಷದ ವ್ಯಕ್ತಿಗೆ ಸೋಂಕು. ಮಾರ್ಚ್ 13-18ರಂದು ದೆಹಲಿಯ ಟಿಜೆ ಧರ್ಮಸಭೆಯಲ್ಲಿ ಭಾಗಿಯಾಗಿದರು. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದೆ.
*ರೋಗಿ-169: ಬೆಂಗಳೂರು ಗ್ರಾಮಾಂತರ ಪ್ರದೇಶದ 35 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು, ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಭಾಗಿಯಾಗಿದ್ದ. ಈಗ ಬೆಂಗಳೂರು ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
*ರೋಗಿ-170: ಬೆಂಗಳೂರಿನ 68 ವರ್ಷದ ವ್ಯಕ್ತಿಯಾಗಿದ್ದು, ದುಬೈಗೆ ಪ್ರಯಾಣ ಮಾಡಿರುವ ಹಿನ್ನೆಲೆಯಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
*ರೋಗಿ-171: ಮಂಡ್ಯದ 32 ವರ್ಷದ ವ್ಯಕ್ತಿಯಾಗಿದ್ದಾನೆ. 134, 135, 136, 137, 138ನೇ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದು, ಮಂಡ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
*ರೋಗಿ-172: 36 ವರ್ಷದ ಮಂಡ್ಯ ಮೂಲದವನಾಗಿದ್ದು, 134,135,136,137,138ನೇ ಸೋಂಕಿತ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದು ಮಂಡ್ಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.