ಬೆಂಗಳೂರು:ಸರಗಳ್ಳರು ಹಾಡಹಗಲೇ ಕ್ಷಣಮಾತ್ರದಲ್ಲಿ ಸರಗಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು. ಯಾವುದಕ್ಕೂ ಹೆದರದ ಸರಗಳ್ಳರು ಕೊರೊನಾ ಅನ್ನೋ ಮಹಾಮಾರಿಗೆ ಹೆದರಿ ಸದ್ಯ ತಮ್ಮ ಕೃತ್ಯ ಮೊಟಕುಗೊಳಿಸಿದ್ದಾರೆ.
ಕೊರೊನಾ ಎಫೆಕ್ಟ್: ಬೆಂಗಳೂರಲ್ಲಿ ನಿಂತ ಸರಗಳ್ಳರ ಕರಾಮತ್ತು! - ಕ್ರೈಮ್ ರೇಟ್ಗಳು ಕಡಿಮೆ
ಕೊರೊನಾದಿಂದಾಗಿ ಸದ್ಯ ಲಾಕೌಡೌನ್ ಹೇರಲಾಗಿದ್ದು, ಸರಗಳ್ಳತನದಂತಹ ಕ್ರೈಂ ರೇಟ್ ಕಡಿಮೆಯಾಗಿದೆ. ಯಾವುದಕ್ಕೂ ಹೆದರದ ಸರಗಳ್ಳರು ಕೊರೊನಾ ಅನ್ನೋ ಮಹಾಮಾರಿಗೆ ಹೆದರಿ ಸದ್ಯ ತಮ್ಮ ಕೃತ್ಯ ಮೊಟಕುಗೊಳಿಸಿದ್ದಾರೆ.
ಕೊರೊನಾದಿಂದಾಗಿ ಸದ್ಯ ಲಾಕೌಡೌನ್ ಹೇರಲಾಗಿದ್ದು, ಸರಗಳ್ಳತನದಂತಹ ಕ್ರೈಂ ರೇಟ್ ಕಡಿಮೆಯಾಗಿದೆ. ಲಾಕೌಡೌನ್ ಹೇರುವ ಮುಂಚೆ ನಗರದ ಗಲ್ಲಿ ಗಲ್ಲಿಗಳನ್ನ ಟಾರ್ಗೆಟ್ ಮಾಡಿ ಬವೇರಿಯಾ ಹಾಗೂ ನೈಜೀರಿಯಾದ ಮಂದಿ, ಮುಂಜಾನೆ ಪಾರ್ಕ್ಗಳಲ್ಲಿ ವಾಕಿಂಗ್ ಹೋಗುವವರು, ಮನೆಯ ಎದುರು ರಂಗೋಲಿ ಬಿಡಿಸುವವರು, ವಯಸ್ಸಾದ ಮಹಿಳೆಯರು, ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಕ್ಷಣಾರ್ಧದಲ್ಲಿ ಕಳ್ಳತನ ಮಾಡಿ ಎಸ್ಕೇಪ್ ಆಗ್ತಿದ್ರು.
ಇನ್ನು ಸರಗಳ್ಳತನ ಪ್ರಕರಣವನ್ನು ಹೆಚ್ಚಾಗಿ ಬವೇರಿಯಾ ಹಾಗೂ ನೈಜಿರಿಯಾ ಗ್ಯಾಂಗ್ನವರು ಮಾಡ್ತಿದ್ರು. ಸದ್ಯ ಸಿಲಿಕಾನ್ ಸಿಟಿಯಲ್ಲಿ ಕಳೆದೆರಡು ತಿಂಗಳಿನಲ್ಲಿ ಯಾವುದೇ ರೀತಿ ಸರಗಳ್ಳತನದಂತಹ ಕ್ರೈಂಗಳು ವರದಿಯಾಗಿಲ್ಲ. ಹೀಗಾಗಿ ಪೊಲೀಸರು ಹಾಗೂ ಸಿಟಿ ಜನತೆ ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.