ಬೆಂಗಳೂರು: ಅನಾದಿ ಕಾಲದಿಂದ ಸಿಡುಬು, ದಡಾರದಂತಹ ರೋಗಗಳ ಪರಿಹಾರಕ್ಕೆ ದೇವರ ಮೊರೆ ಹೋಗುವುದು ರೂಢಿಯಲ್ಲಿದೆ. ಈಗ ದೇಶವನ್ನು ಕಾಡುತ್ತಿರುವ ಕೊರೊನಾದಿಂದ ಮುಕ್ತಿ ಹೊಂದಲು ಜನರು ಶಕ್ತಿ ದೇವತೆಗಳ ಮೊರೆ ಹೋಗಬೇಕೆಂದು ಅರ್ಚಕರು ಹೇಳಿದ್ದಾರೆ.
ಕೊರೊನಾ ನಿವಾರಣೆಗೆ ಶಕ್ತಿ ದೇವತೆಗಳ ಮೊರೆ ಹೋಗಬೇಕೆಂದ ಅರ್ಚಕರು! - ರಾಜ್ಯದಲ್ಲಿ ಕೊರೊನಾ ಭೀತಿ
ಅನಾದಿ ಕಾಲದಿಂದ ಸಿಡುಬು, ದಡಾರದಂತಹ ರೋಗಗಳ ಪರಿಹಾರಕ್ಕೆ ದೇವರ ಮೊರೆ ಹೋಗುವುದು ರೂಢಿಯಲ್ಲಿದೆ. ಇದೀಗ ದೇಶವನ್ನು ಕಾಡುತ್ತಿರುವ ಕೊರೊನಾದಿಂದ ಮುಕ್ತಿ ಹೊಂದಲು ಜನರು ಶಕ್ತಿ ದೇವತೆಗಳ ಮೊರೆ ಹೋಗಬೇಕೆಂದು ಅರ್ಚಕರೊಬ್ಬರು ಹೇಳಿದ್ದಾರೆ.
ಈ ಕುರಿತಂತೆ ಈಟವಿ ಭಾರತದೊಂದಿಗೆ ಮಾತನಾಡಿರುವ ನಗರದ ಪ್ಲೇಗ್ ಮಾರಿಕಾಂಬ ದೇವಾಲಯದ ಪ್ರಧಾನ ಅರ್ಚಕ ಪುರುಷೋತ್ತಮ್, ಕೊರೊನಾ ಮಾಹಾಮಾರಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದು, ರಾಜ್ಯದ ಕೆಲವು ಕಡೆ ಕೊರೊನಾ ಮಾರಮ್ಮ ಹೆಸರಿನಲ್ಲಿ ಪೂಜೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಶಕ್ತಿ ದೇವತೆಗಳ ಮೊರೆ ಹೊದರೆ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.
ಸುಮಾರು 80 ವರ್ಷಗಳ ಹಳೆಯ ಬ್ಯಾಟರಾಯನಪುರದ ಪ್ಲೇಗ್ ಮಾರಮ್ಮನ ದೇವಾಲಯ ಇದ್ದು, ಅಲ್ಲಿ ಹೋಗಿ ಬೇಡಿಕೊಂಡರೆ ರೋಗ ನಿವಾರಣೆ ಆಗುತ್ತದೆಯಂತೆ, ಇಲ್ಲಿಗೆ ಬಂದು ಜನರು ಕೊರೊನಾ ಸಂಬಂಧ ವಿಶೇಷ ಪೂಜೆಗಳನ್ನು ಮಾಡಿದರೆ ಈ ಸೋಂಕು ತೊಲಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡರು.