ಕರ್ನಾಟಕ

karnataka

By

Published : Mar 17, 2020, 12:40 PM IST

ETV Bharat / state

ರಾಜ್ಯದಲ್ಲಿ ಇದುವರೆಗೆ ಪತ್ತೆಯಾದ ಕೊರೊನಾ​ ಸೋಂಕಿತ ಪ್ರಕರಣಗಳ ವಿವರ ಇಲ್ಲಿದೆ..

ರಾಜ್ಯದಲ್ಲಿ ಇದುವರೆಗೆ ಒಟ್ಟು 11 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ.

ರಾಜ್ಯಕ್ಕೂ ಕೊರೊನಾ ಕಂಟಕ Corona effect on Karnataka
ರಾಜ್ಯಕ್ಕೂ ಕೊರೊನಾ ಕಂಟಕ

ಬೆಂಗಳೂರು : ರಾಜ್ಯದಲ್ಲಿ ಇದುವರೆಗೆ ಒಟ್ಟು 11 ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಓರ್ವ ಸಾವನ್ನಪ್ಪಿದ್ದು, 10 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ದಾಖಲಾಗಿರುವ 11 ಕೊರೊನಾ ಪ್ರಕರಣಗಳು :

  • ಪ್ರಕರಣ 1 : ಯುಎಸ್​ಎಯಿಂದ ಬಂದಿದ್ದ ಬೆಂಗಳೂರಿನ ವೈಟ್​ಫೀಲ್ಡ್ ಮೂಲದ ಟೆಕಿಯಲ್ಲಿ ಮೊದಲ ಕೊರೊನಾ ವೈರಸ್​ ಪತ್ತೆ. ಮಾರ್ಚ್ 9 ರಂದು ಸೋಂಕು ದೃಢಪಟ್ಟಿದ್ದು, ರಾಜೀವ್​ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ 2 : ವೈಟ್​ಫೀಲ್ಡ್ ಮೂಲದ ವ್ಯಕ್ತಿಯ ಪತ್ನಿಗೆ ಕೊರೊನಾ ಸೋಂಕು ಪತ್ತೆಯಾಯಿತು. ಮಾರ್ಚ್ 10 ರಂದು ಸೋಂಕು ಇರುವುದು ದೃಢಪಟ್ಟಿತು. ಟೆಕಿಯಿಂದ ಸೋಂಕು ತಗುಲಿದ್ದು, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ 3 : ವೈಟ್​ಫೀಲ್ಡ್ ಮೂಲದ ಟೆಕಿಯ ಪುತ್ರಿಗೆ ಮಾರ್ಚ್ 10ರಂದು ಸೋಂಕು ತಗುಲಿರುವುದು ದೃಢಪಟ್ಟಿತು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ 4 : ಅಮೆರಿಕದಿಂದ ಬಂದಿದ್ದ ಗೂಗಲ್ ಉದ್ಯಮಿ, ಆರ್.ಆರ್. ನಗರದ ನಿವಾಸಿಯಾಗಿರುವ ಟೆಕಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತು.
  • ಪ್ರಕರಣ 5 : ಗ್ರೀಸ್ ನಿಂದ ಬಂದಿದ್ದ 26 ವರ್ಷದ ಬೆಂಗಳೂರು ಮೂಲದ ಟೆಕಿಯಲ್ಲಿ ಮಾರ್ಚ್ 12 ರಂದು ಕೊರೊನಾ ಸೋಂಕು ಖಚಿತವಾಗಿತ್ತು. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

ಓದಿ:ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯನಿಗೂ ತಗುಲಿತು ಕೊರೊನಾ: ಕಲಬುರಗಿ ಜಿಲ್ಲಾಧಿಕಾರಿ ಸ್ಪಷ್ಟನೆ

  • ಪ್ರಕರಣ 6 :ಸೌದಿ ಅರೇಬಿಯಾದಿಂದ ಬಂದಿದ್ದ ಕಲಬುರಗಿ ಮೂಲದ 76 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮಾರ್ಚ್​ 9 ರಂದು ಸಾವನ್ನಪ್ಪಿದ್ದರು.
  • ಪ್ರಕರಣ 7 : ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಕಲಬುರಗಿ ಮೂಲದ ವ್ಯಕ್ತಿಯ ಪುತ್ರಿಗೆ ಮಾರ್ಚ್ 15 ರಂದು ಸೋಂಕು ಇರುವುದು ತಿಳಿದುಬಂದಿತ್ತು.
  • ಪ್ರಕರಣ 8 : ಅಮೆರಿಕದಿಂದ ಬಂದಿದ್ದ ಗೂಗಲ್ ಉದ್ಯಮಿಯ ಸಹೋದ್ಯೋಗಿಯಾಗಿಗೆ ಮಾರ್ಚ್ 16 ರಂದು ಸೋಂಕು ಇರುವುದು ದೃಢಪಟ್ಟಿತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ.
  • ಪ್ರಕರಣ 9 : ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಮತ್ತೋರ್ವ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿತು.
  • ಪ್ರಕರಣ 10 : ಕಲಬುರಗಿಯ ಮತ್ತೋರ್ವ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ಮಾರ್ಚ್ 16 ರಂದು ದೃಢಪಟ್ಟಿತು.
  • ಪ್ರಕರಣ 11 : ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಮೃತಪಟ್ಟ ವೃದ್ಧನ ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದ ವೈದ್ಯನಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ.

ABOUT THE AUTHOR

...view details