ಬೆಂಗಳೂರು :ಕೊರೊನಾ ಲಾಕ್‌ಡೌನ್ ಹಿನ್ನೆಲೆ ರಾಜ್ಯ ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರಿಗೆ ನೆರವಿನ ಹಸ್ತ ನೀಡುತ್ತಿದೆ. ಲಾಕ್ಡೌನ್ನ 21 ದಿನಗಳ ಕಾಲ ಬಡ ಬಗ್ಗರಿಗೆ ಆಹಾರ ಭದ್ರತೆ ಜೊತೆಗೆ ಆರ್ಥಿಕ ಭದ್ರತೆಯ ಹೊಣೆಗಾರಿಕೆಯನ್ನೂ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ. ಆದರೆ, ಈ ಅನಿವಾರ್ಯತೆಯ ಹೊಣೆಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ಹೊರೆ ಬೀಳುತ್ತಿದೆ.
ಕೊರೊನಾ ಲಾಕ್‌ಡೌನ್.. ಕಾರ್ಮಿಕರು, ಬಡವರಿಗೆ ಉಚಿತ ಆಹಾರ.. ಬೊಕ್ಕಸಕ್ಕಾಗ್ತಿರುವ ಹೊರೆ ಎಷ್ಟು? - ಉಚಿತ ಆಹಾರ ವಿತರಣೆ
ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರ ನೆರವಿಗೆ ಧಾವಿಸಿ ಉಚಿತ ಆಹಾರ, ಹಾಲು ಮತ್ತು ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ರಾಜ್ಯ ಸರ್ಕಾರವೇ ಬಡವರು, ಕಾರ್ಮಿಕರ ನೆರವಿಗೆ ಆಗಮಿಸಿದೆ.
![ಕೊರೊನಾ ಲಾಕ್‌ಡೌನ್.. ಕಾರ್ಮಿಕರು, ಬಡವರಿಗೆ ಉಚಿತ ಆಹಾರ.. ಬೊಕ್ಕಸಕ್ಕಾಗ್ತಿರುವ ಹೊರೆ ಎಷ್ಟು? free food distribute](https://etvbharatimages.akamaized.net/etvbharat/prod-images/768-512-6686101-thumbnail-3x2-chaii.jpg)
ಉಚಿತ ಆಹಾರ
ಲಾಕ್‌ಡೌನ್ ಹಿನ್ನೆಲೆ ರಾಜ್ಯವೆಲ್ಲ ಸ್ತಬ್ಧವಾಗಿದೆ. ರಾಜ್ಯಾದ್ಯಂತ ವ್ಯಾಪಾರ, ವಹಿವಾಟುಗಳೆಲ್ಲ ಸ್ಥಗಿತವಾಗಿವೆ. ಇದರಿಂದ ಕಾರ್ಮಿಕರು, ಬಡವರಿಗೆ ದಿನದ ತುತ್ತಿಗಾಗಿ ಪರದಾಡುವಂತಾಯಿತು. ಈ ಲಕ್ಷಾಂತರ ಕಾರ್ಮಿಕರು, ಬಡವರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಲಕ್ಷಾಂತರ ಕಾರ್ಮಿಕರು, ಬಡವರ ನೆರವಿಗೆ ಧಾವಿಸಿ ಉಚಿತ ಆಹಾರ, ಹಾಲು ಮತ್ತು ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. 21 ದಿನಗಳ ಲಾಕ್‌ಡೌನ್ ಅವಧಿಯಲ್ಲಿ ರಾಜ್ಯ ಸರ್ಕಾರವೇ ಬಡವರು, ಕಾರ್ಮಿಕರ ನೆರವಿಗೆ ಆಗಮಿಸಿದೆ.
ಬಡ ಬಗ್ಗರಿಗೆ ಉಚಿತ ಆಹಾರ ವಿತರಣೆ..
1,12,300 ಲಕ್ಷ ಕಾರ್ಮಿಕರಿಗೆ ಉಚಿತ ಆಹಾರ :ಲಾಕ್‌ಡೌನ್ ಹಿನ್ನೆಲೆ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳಿಗೆ ಗುಳೇ ಹೋದರು. ಸಾಮೂಹಿಕ ಗುಳೇ ಹೋಗುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಲಿ ಕಾರ್ಮಿಕರಿಗೆ ಉಚಿತ ಆಹಾರದ ವ್ಯವಸ್ಥೆಯನ್ನು ಮಾಡಿದೆ. ಈ ಸಂಬಂಧ ಸುಮಾರು ಎರಡು ಲಕ್ಷ ಕಾರ್ಮಿಕರು ರಾಜ್ಯದ ವಿವಿಧೆಡೆ ನಿರ್ಮಿಸಿದ ಕ್ಯಾಂಪ್‌ಗಳಲ್ಲಿ ತಂಗಿದ್ದಾರೆ. ಈ ಪೈಕಿ ರಾಜ್ಯ ಸರ್ಕಾರ 1,12,300 ಲಕ್ಷ ಕಾರ್ಮಿಕರಿಗೆ ಸರ್ಕಾರವೇ ಮೂರು ಹೊತ್ತಿನ ಉಚಿತ ಆಹಾರ ನೀಡುತ್ತಿದೆ. ಅದರಂತೆ ಏ.14ರವರೆಗೆ ಸರ್ಕಾರ ಉಚಿತ ಆಹಾರ ನೀಡಲಿದೆ. ಸುಮಾರು 20 ಕೋಟಿ ರೂ. ವ್ಯಯಿಸುತ್ತಿದೆ.