ಕರ್ನಾಟಕ

karnataka

ETV Bharat / state

ಬಾರ್‌ಗಳಲ್ಲಿ ಏರದ 'ಕಿಕ್'‌.. ರೆಸ್ಟೋರೆಂಟ್​ಗಳಲ್ಲಿ ಹೆಚ್ಚು ಬೇಯ್ತಿಲ್ಲ ಬಾಡು.. ಕೊರೊನಾ ತೊಲಗುವುದ್ಯಾವಾಗ ಓ ಗಾಡು!! - Corona effect on Bar news

ಬಾರ್​, ಪಬ್​ಗಳಂತೂ ವೀಕೆಂಡ್​ಗಳಲ್ಲಿ ಮೋಜು ಮಸ್ತಿಗೆಂದು ಬರುವ ಜನರಿಂದ ಕಿಕ್ಕಿರಿಯುತ್ತಿದ್ದವು. ಆದರೆ, ಕೊರೊನಾ ಭೀತಿ ಮತ್ತು ಸರ್ಕಾರದ ನಿರ್ಬಂಧಗಳಿಂದ ಗ್ರಾಹಕರಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೊರೊನಾ ಪರಿಣಾಮ ಆರ್ಥಿಕ ಸಂಕಷ್ಟದಿಂದ ಬಾರ್​ ಮತ್ತು ರೆಸ್ಟೋರೆಂಟ್​ಗಳ ಮಾಲೀಕರು ಹಾಗೂ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ..

Corona effect on Bar and restaurants
ಬಾರ್​-ರೆಸ್ಟೋರೆಂಟ್​ಗಳ ಮೇಲೆ ಕೊರೊನಾ ಕರಿನೆರಳು

By

Published : Sep 1, 2020, 3:24 PM IST

ವೀಕೆಂಡ್​ ಬಂದ್ರೆ ಸಾಕು, ಬಾರ್, ಪಬ್​, ರೆಸ್ಟೋರೆಂಟ್​ಗಳೆಲ್ಲ ಜನರಿಂದ ತುಂಬಿ ಹೋಗುತ್ತಿದ್ದವು. ಆದರೆ ಒಂದೆಡೆ ಕೊರೊನಾ ಭೀತಿ.. ಮತ್ತೊಂದೆಡೆ ಸರ್ಕಾರ ಹೇರಿದ ನಿಯಮಗಳಿಂದಾಗಿ ಜನರಿಲ್ಲದೆ ಬಣಗುಡುತ್ತಿವೆ. ಇದರಿಂದಾಗಿ ಅವುಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಬಾರ್ ಅಂಡ್‌ ರೆಸ್ಟೋರೆಂಟ್​ಗಳಲ್ಲಿ ಏರದ ಕಿಕ್‌..

ಕೊರೊನಾ ಮೊದ ಮೊದಲು ಸರ್ಕಾರ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ವಿಧಿಸಿತು. ಲಾಕ್​ಡೌನ್​ನಿಂದಾಗಿ ಬಾರ್, ರೆಸ್ಟೋರೆಂಟ್​ಗಳಿಗೆ ಬೀಗ ಜಡಿದ ಪರಿಣಾಮ ಮಾಲೀಕರು ಮಾತ್ರವಲ್ಲದೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೀವನ ಸಹ ದುಸ್ತರವಾಗಿದೆ. ಬಳಿಕ ಸರ್ಕಾರ ಅನ್​ಲಾಕ್​ ಪ್ರಕ್ರಿಯೆ ಆರಂಭಿಸಿದ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ರೆಸ್ಟೋರೆಂಟ್​ಗಳತ್ತ ಮುಖ ಮಾಡದಿರುವುದರಿಂದ ಬ್ಯುಸಿನೆಸ್ ಕೂಡ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.

ಈ ಮೊದಲು ಬೆಳಗ್ಗೆಯಿಂದ ತಡರಾತ್ರಿಯವರೆಗೂ ರೆಸ್ಟೋರೆಂಟ್​ಗಳು ಗಿಜಿಗುಡುತ್ತಿದ್ದವು. ಆದರೀಗ, ಗ್ರಾಹಕರಿಲ್ಲದೇ ಬಣಗುಡುತ್ತಿವೆ. ನಾನ್‌ವೆಜ್ ಹಾಗೂ ವೆಜಿಟೇರಿಯನ್ ಖಾದ್ಯ ತಿನಿಸುಗಳನ್ನ ಬಿಸಿಬಿಸಿಯಾಗಿ ತಯಾರಿಸಿಕೊಟ್ಟರು ಕೂಡ ಗ್ರಾಹಕರು ಮಾತ್ರ ಬೆರಳೆಣಿಕೆಯಷ್ಟು ಬರುತ್ತಾರೆ. ಆನ್​ಲೈನ್ ಮಾರುಕಟ್ಟೆಯಲ್ಲೂ ಶೇ.20-30ರಷ್ಟು ವ್ಯಾಪಾರವಾಗುತ್ತಿದೆ. ಅದರಲ್ಲೂ ಮಟನ್ ಹಾಗೂ ಚಿಕನ್ ಬಿರಿಯಾನಿಗೆ ಹೆಚ್ಚಿನ ಬೇಡಿಕೆ ಇದೆ. ಅದು ಬಿಟ್ಟರೆ ಸಸ್ಯಾಹಾರಕ್ಕೆ ಡಿಮ್ಯಾಂಡ್ ಕಡಿಮೆ. ಇದರಿಂದಾಗಿ ರೆಸ್ಟೋರೆಂಟ್​ಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೂ ಗ್ರಾಹಕರಿಲ್ಲದೇ ವ್ಯಾಪಾರ ಕುಗ್ಗಿದೆ.

ಬಾರ್​, ಪಬ್​ಗಳಂತೂ ವೀಕೆಂಡ್​ಗಳಲ್ಲಿ ಮೋಜು ಮಸ್ತಿಗೆಂದು ಬರುವ ಜನರಿಂದ ಕಿಕ್ಕಿರಿಯುತ್ತಿದ್ದವು. ಆದರೆ, ಕೊರೊನಾ ಭೀತಿ ಮತ್ತು ಸರ್ಕಾರದ ನಿರ್ಬಂಧಗಳಿಂದ ಗ್ರಾಹಕರಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೊರೊನಾ ಪರಿಣಾಮ ಆರ್ಥಿಕ ಸಂಕಷ್ಟದಿಂದ ಬಾರ್​ ಮತ್ತು ರೆಸ್ಟೋರೆಂಟ್​ಗಳ ಮಾಲೀಕರು ಹಾಗೂ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದ ನೆರವನ್ನು ಎದುರು ನೋಡ್ತಿದ್ದಾರೆ ಮಾಲೀಕರು.

ABOUT THE AUTHOR

...view details