ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ : ಸತತ ನಾಲ್ಕನೇ ಬಾರಿಯೂ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ರದ್ದು

ಲಾಲ್ ಬಾಗ್​​ನ ಫ್ಲವರ್ ಶೋಗೆ ಲಕ್ಷಾಂತರ ಪ್ರವಾಸಿಗರು ಬರುವುದರಿಂದ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ಆಗುವುದಿಲ್ಲ. ಜೊತೆಗೆ ಇನ್ನಷ್ಟು ಖರ್ಚು, ವೆಚ್ಚಗಳು ಹೆಚ್ಚಾಗುವ ಕಾರಣಕ್ಕೆ ಈ ವರ್ಷ ಫಲಪುಷ್ಪ ಪ್ರದರ್ಶನ ನಡೆಸದಿರಲು ತೀರ್ಮಾನಿಸಲಾಗಿದೆ.‌.

ಫಲಪುಷ್ಪ ಪ್ರದರ್ಶನ ರದ್ದು
ಫಲಪುಷ್ಪ ಪ್ರದರ್ಶನ ರದ್ದು

By

Published : Jan 18, 2022, 7:04 PM IST

ಬೆಂಗಳೂರು :ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಅಂದರೆ ಬೆಂಗಳೂರಿಗರು ಮಾತ್ರವಲ್ಲ ಅಕ್ಕ ಪಕ್ಕದ ಜಿಲ್ಲೆಗಳ ಜನರು, ಹೊರ ರಾಜ್ಯದವರು, ವಿದೇಶಿಗರು ಎಲ್ಲರೂ ಬಂದು ಕಣ್ತುಂಬಿಕೊಳ್ಳುತ್ತಿದ್ದರು. ವರ್ಷದಲ್ಲಿ ಎರಡು ಬಾರಿ ಫ್ಲವರ್ ಶೋ ಆಯೋಜಿಸಲಾಗುತ್ತಿತ್ತು.

ಒಂದು ಗಣರಾಜ್ಯೋತ್ಸವದಂದು ಮತ್ತೊಮ್ಮೆ ಸ್ವಾತಂತ್ರ್ಯ ದಿನದಂದು. ಎರಡು ವಾರಕ್ಕೂ ಮೊದಲೇ ಮೈಸೂರು ಕಲಾ ಸಂಘ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಈ ಪ್ರದರ್ಶನ ನಡೆಸುತ್ತಿತ್ತು. ಆದರೆ, ಯಾವಾಗ ಕೋವಿಡ್ ಸೋಂಕು ಹಾಗೂ ಅದರ ರೂಪಾಂತರಿ ವೈರಸ್ ಉಪಟಳ ಶುರುವಾಯ್ತೋ, ಫ್ಲವರ್ ಶೋ ನಡೆಸಲು ಕಷ್ಟ ಸಾಧ್ಯವಾಗುತ್ತಿದೆ.

ಈ ಬಾರಿಯೂ ಜನವರಿ 26ರ ಗಣರಾಜ್ಯೋತ್ಸವಕ್ಕೆ ಫಲಪುಷ್ಪ ಪ್ರದರ್ಶನ ನಡೆಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ, ಮೂರನೇ ಅಲೆಯಲ್ಲಿ ಒಮಿಕ್ರಾನ್ ಆರ್ಭಟದಿಂದಾಗಿ ಸದ್ಯ ಸ್ಥಗಿತ ಮಾಡಲಾಗಿದೆ. ಲಾಲ್‌ಬಾಗ್​​ನ ಫ್ಲವರ್ ಶೋಗೆ ಲಕ್ಷಾಂತರ ಪ್ರವಾಸಿಗರು ಬರುವುದರಿಂದ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ಆಗುವುದಿಲ್ಲ. ಜೊತೆಗೆ ಇನ್ನಷ್ಟು ಖರ್ಚು, ವೆಚ್ಚಗಳು ಹೆಚ್ಚಾಗುವ ಕಾರಣಕ್ಕೆ ಈ ವರ್ಷ ನಡೆಸದಿರಲು ತೀರ್ಮಾನಿಸಿದ್ದಾರೆ.‌

ಈ ಕುರಿತು ಪ್ರತಿಕ್ರಿಯಿಸಿರುವ ಲಾಲ್ ಬಾಗ್​​ನ ಜಂಟಿ ನಿರ್ದೇಶಕರಾದ ಡಾ.ಜಗದೀಶ್, ಫ್ಲವರ್ ಶೋ ವೀಕ್ಷಣೆಗೆ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ‌. ಈ ಬಾರಿ ಸರ್ಕಾರ ಅನುಮತಿ ನೀಡಿದಾಗ, ಮೈಸೂರು ಕಲಾ ಸಂಘ ಹಾಗೂ ತೋಟಗಾರಿಕಾ ಇಲಾಖೆ ಸೇರಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಕೋವಿಡ್​​​ನ ರೂಪಾಂತರಿ ಒಮಿಕ್ರಾನ್ ಪತ್ತೆಯಾಗಿರುವುದರಿಂದ ಜನರನ್ನ ನಿಯಂತ್ರಿಸುವುದು ಅಸಾಧ್ಯವಾಗಲಿದೆ.

ಈ ನಿಟ್ಟಿನಲ್ಲಿ ಫಲಪುಷ್ಪ ಪ್ರದರ್ಶನ ನಡೆಸದಿರಲು ತೀರ್ಮಾನಿಸಲಾಗಿದೆ ಎಂದರು.‌ ಕೊರೊನಾ ಕಾರಣದಿಂದಾಗಿ ರಾಜ್ಯದಲ್ಲಿ ಸತತ ನಾಲ್ಕನೇ ಬಾರಿಯೂ ಲಾಲ್‌ಬಾಗ್ ಫ್ಲವರ್ ಶೋ ರದ್ದು ಮಾಡಲಾಗುತ್ತಿದೆ. ಮುಂದಿನ ಸ್ವಾತಂತ್ರ್ಯ ದಿನದ ಸಮಯದಲ್ಲಾದರೂ ಶೋ ನಡೆಯುತ್ತಾ? ಇಲ್ಲ ಆಗಲೂ ಕೋವಿಡ್ ಸೋಂಕು ಕಾಡುತ್ತಾ ಕಾದು ನೋಡಬೇಕಿದೆ.

ABOUT THE AUTHOR

...view details