ಕರ್ನಾಟಕ

karnataka

ETV Bharat / state

ಬಣ್ಣದೋಕುಳಿಗೂ ಕೊರೊನಾ ಕರಿನೆರಳು: ಜನಸಂದಣಿಯಿಂದ ದೂರ ಇರುವಂತೆ ಸೂಚನೆ - ಕೊರೊನಾ ಭೀತಿ

ಈ ಬಾರಿಯ ಹೋಳಿ ಹಬ್ಬಕ್ಕೆ ಕೊರೊನಾ ವೈರಸ್​ನ ಕರಿನೆರಳು ಬಿದಿದ್ದು ಜನ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುತ್ತಿದ್ದಾರೆ.

ಕೊರೊನಾ ಕರಿನೆರಳು
ಕೊರೊನಾ ಕರಿನೆರಳು

By

Published : Mar 9, 2020, 9:40 PM IST

ಬೆಂಗಳೂರು:ಬಣ್ಣದ ಹಬ್ಬ ಹೋಳಿ ಬಂತು ಅಂದರೆ, ಉದ್ಯಾನ ನಗರಿ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ರಂಗಿನ ಹೋಳಿ ಜೋರಾಗಿ ಇರುತ್ತೆ. ಆದರೆ ಈ ಬಾರಿಯ ಹೋಳಿ ಹಬ್ಬಕ್ಕೆ ಕೊರೊನಾ ವೈರಸ್​ನ ಕರಿನೆರಳು ಬಿದಿದ್ದು ಜನ ಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುತ್ತಿದ್ದಾರೆ.

ಇತ್ತ ಕೊರೊನಾ ಭೀತಿ ಹಿನ್ನೆಲೆ ಪಾಲಿಕೆಯ ಆಯುಕ್ತ ಅನಿಲ್ ಕುಮಾರ್ ಕೂಡ ಸಂದೇಶ ರವಾನಿಸಿದ್ದು, ಜನಸಂದಣಿ ಇರುವ ಜಾಗದಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಸಭೆ-ಸಮಾರಂಭದಿಂದ ಹಿಡಿದು, ನಾಳೆ ಆಚರಿಸುವ ಹೋಳಿ ಹಬ್ಬದಂದು ಕೂಡ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಆಯುಕ್ತ ಅನಿಲ್ ಕುಮಾರ್

ಸಾಮಾನ್ಯವಾಗಿ ಹೋಳಿ ಹಬ್ಬದಂದು ಖಾಸಗಿ ಹೋಟೆಲ್​ಗಳಲ್ಲಿ ಸ್ವಿಮ್ಮಿಂಗ್ ಫೂಲ್​ನಲ್ಲಿ ಬಣ್ಣ ತುಂಬಿ ಸಂಭ್ರಮಿಸುವುದೆಲ್ಲ ಮಾಡಲಾಗುತ್ತೆ.‌ ಇಂತಹ ಪಾರ್ಟಿಗಳಿಂದ ದೂರವಿರುವಂತೆ ಸೂಚಿಸಲಾಗಿದೆ.‌

ABOUT THE AUTHOR

...view details